ತಂದೆ-ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ

ತಂದೆ-ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಾಸರಗೋಡು: ಚೆಮ್ನಾಡ್ ಕೋಳಿಯಡ್ಕ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ತಂದೆ ಮತ್ತು ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೂಲತಃ ಮೀಪುಗಿರಿ ನಿವಾಸಿಗಳಾದ ಗಣೇಶ್ (47) ಮತ್ತು ಅವರ ಪುತ್ರಿ ದ್ವಿತೀಯ ಪಿಯುಸಿ (+2) ವಿದ್ಯಾರ್ಥಿನಿ ವೈಷ್ಣವಿ (17) ಮೃತಪಟ್ಟವರು.

ಚೆಮ್ನಾಡ್ ಕೋಳಿಯಡ್ಕದ ಶಿವಪುರ ಕ್ಷೇತ್ರದ ಸಮೀಪವಿರುವ ಬಾಡಿಗೆ ಮನೆಯೊಂದರಲ್ಲಿ ಇವರು ವಾಸವಾಗಿದ್ದರು. ಶನಿವಾರ ತಡರಾತ್ರಿ ವೇಳೆಗೆ ಇಬ್ಬರೂ ಮಲಗುವ ಕೋಣೆಯ ಒಂದೇ ಹುಕ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೊದಲು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ತಂದೆಯೂ ಅದೇ ಹಗ್ಗದಲ್ಲಿ ಜೀವ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ಇನ್ನು ತಿಳಿಯಬೇಕಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article