ಕಷ್ಟದ ನಡುವೆಯೂ ಜೀವನ ಕಟ್ಟಿಕೊಳ್ಳುವುದು ಹೇಗೆ ಎಂಬುವುದು ಕೃಷಿ ಬದುಕಿನ ಸತ್ವದಿಂದ ಉಳಿದಿದೆ: ಮೀನಾಕ್ಷಿ
ಪ್ರಸ್ತುತ ಇಂದಿನ ದಿನದಲ್ಲಿ ಶಿಕ್ಷಣ ವಾಣಿಜ್ಯವಾಗಿ ಮಾರ್ಪಟ್ಟಿದೆ. ಪಠ್ಯ ಪುಸ್ತಕದಲ್ಲಿ ಕೃಷಿ ಬದುಕಿನ ಪಾಠ ಕಣ್ಮರೆಯಾಗಿ, ಜಣ ಜಣ ಕಾಂಚಾಣವಾಗಿ ಬದಲಾಗಿದೆ. ಉದ್ಯೋಗ, ಹಣವಿದ್ದ ಮಾತ್ರಕ್ಕೆ ಜೀವನ ಸಾಧ್ಯವಿಲ್ಲ. ತುತ್ತು ಊಟಕ್ಕಾಗಿ ಕೃಷಿ ಉಳಿಯಬೇಕು.ರೈತಾಪಿ ವರ್ಗದ ಬದುಕು ಗಟ್ಟಿಯಾಗ ಬೇಕು ಎಂದರು.
ಆಟಿ ಎಂದರೆ ಕಷ್ಟದ ತಿಂಗಳು, ಇದ್ದುದರಲ್ಲಿ ಹಂಚಿಕೊಂಡು ತಿನ್ನಬೇಕು ಎಂಬ ಸಂದೇಶದ ಸಾರವೂ ಇತ್ತು ಎಂದು ಸ್ಮರಿಸಿ ಕೊಂಡರು.
ಆಟಿಡೊಂಜಿ ದಿನದಂತಹ ಧಾರ್ಮಿಕ, ರಾಷ್ಟ್ರೀಯ, ಸಾಮಾಜಿಕ ಕಾರ್ಯಕ್ರಮಗಳನ್ನು ದತ್ತ ನಗರ ನಿವಾಸಿಗಳ ಸಂಘ ಹಮ್ಮಿಕೊಳ್ಳುತ್ತಾ ಬರುತ್ತಿರುವುದು ಶ್ಲಾಘನೀಯ ಇದರಿಂದ ಪೂರ್ವಜರು ಆಚರಿಸಿಕೊಂಡು ಬರುತ್ತಿದ್ದ ಬಗೆಯನ್ನು ನಮ್ಮ ಮಕ್ಕಳಿಗೆ ಕಲಿಯಲು ಒಳ್ಳೆಯ ಅವಕಾಶ ಎಂದರು.
ಎಚ್.ಕೆ. ಪುರುಷೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿ, ದತ್ತನಗರ ನಿವಾಸಿಗಳ ಸಂಘವು ರಾಷ್ಟ್ರೀಯ ಹಾಗೂ ನಮ್ಮ ಪರಂಪರಾಗತ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದು, ನಮ್ಮ ಸಂಸ್ಕೃತಿ, ಸಂಸ್ಕಾರಯುತ ಜೀವನಕ್ಕೆ ಆದ್ಯತೆ ನೀಡುವುದೇ ಆಗಿದೆ, ಸ್ವಚ್ಛತೆಗೂ ದತ್ತನಗರ ಮಾದರಿಯಾಗಿದೆ ಎಂದರು.
ಸಂಘದ ಅಧ್ಯಕ್ಷ ರಾಜಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಎಲ್ಲರ ಸಹಕಾರದಿಂದ ಸಂಘವು ಇಂತಹ ಆಚರಣೆ, ಸಂಭ್ರಮವನ್ನು ಆಚರಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ನಿಕಟ ಪೂರ್ವ ಪಾಲಿಕೆ ಸದಸ್ಯೆ ವನಿತಾ ಪ್ರಸಾದ್, ಕೋಶಾಧಿಕಾರಿ ಉದಯಕುಮಾರ್, ಕಾರ್ಯದರ್ಶಿ ಸಾಯೀಶ್ ಸಂಘದ ನಿಕಟ ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರವೀಣ್ ಶೆಟ್ಟಿ ನಿರೂಪಿಸಿದರು.
ಸಂಘದ ಸದಸ್ಯರು ಮನೆ ಮನೆಯಿಂದ ತಯಾರಿಸಿ ತಂದ ಆಟಿ ವಿಶೇಷ ಉಪಹಾರ, ಖಾದ್ಯಗಳನ್ನು ನೆರೆದವರಿಗೆ ಉಣಬಡಿಸಲಾಯಿತು.
