ಮೂಡುಬಿದಿರೆ: ಲಾಡಿ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗರ ಪಂಚಮಿ ಉತ್ಸವ
Monday, August 17, 2026
ಮೂಡುಬಿದಿರೆ: ಪುರಸಭೆಯ ಲಾಡಿ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗರ ಪಂಚಮಿ ಉತ್ಸವವು ಭಕ್ತಿಭಾವದಿಂದ ನೆರವೇರಿತು.
ಪುರೋಹಿತರಾದ ಸುಧಾಕರ್ ಭಟ್ ಅವರ ನೇತೃತ್ವದಲ್ಲಿ ನಾಗತಂಬಿಲ, ಹಾಲಿನ ಅಭಿಷೇಕ ಹಾಗೂ ಸಿಯಾಳ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಉತ್ಸವವು ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಲಾಡಿ ಶ್ರೀ ನಾಗಬ್ರಹ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರವಿಪ್ರಸಾದ್ ಕೆ. ಶೆಟ್ಟಿ, ಉಪಾಧ್ಯಕ್ಷರಾದ ಗಿರೀಶ್, ಕಾರ್ಯದರ್ಶಿ ಗಣೇಶ್ ರಾವ್, ಕೋಶಾಧಿಕಾರಿ ಸ್ಮಿತಾ, ಸದಸ್ಯರಾದ ಪ್ರಶಾಂತ್ ಪ್ರಸಾದ್ ಹಾಗೂ ರೇಣುಕಾ ಮತ್ತು ಪ್ರಧಾನ ಅರ್ಚಕರಾದ ಸುಧಾಕರ್ ಭಟ್ ಉಪಸ್ಥಿತರಿದ್ದರು.
