ಮನೆಯಲ್ಲಿ ಫ್ರಿಜ್ ಸ್ಪೋಟ: ಗೃಹಿಣಿ ಅಪಾಯದಿಂದ ಪಾರು
Tuesday, August 11, 2026
ಪುತ್ತೂರು: ಮನೆಯ ಗೃಹಿಣಿ ಅಡುಗೆ ತಯಾರಿ ನಡೆಸುತ್ತಿರುವ ಸಂದರ್ಭ ಮನೆಯಲ್ಲಿದ್ದ ಫ್ರಿಜ್ ಸ್ಪೋಟಗೊಂಡ ಪರಿಣಾಮ ಅಡುಗೆ ಮನೆಯ ವಸ್ತುಗಳಿಗೆ ಬೆಂಕಿ ಆವರಿಸಿ ಗೃಹಿಣಿ ಸಂಭವನೀಯ ಅಪಾಯದಿಂದ ಪಾರಾದ ಘಟನೆ ಕಡಬ ತಾಲೂಕಿನ ರಾಮಕುಂಜ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಫ್ರಿಜ್ ಸ್ಪೋಟಗೊಂಡು ಲಕ್ಷಾಂತರ ರೂ. ನಷ್ಟಗೊಂಡಿದೆ.
ರಾಮಕುಂಜ ಗ್ರಾಮಪಂಚಾಯತ್ ಸಮೀಪದಲ್ಲಿರುವ ಉದ್ಯಮಿ ಉದ್ಯೋಗಿ ಸಿದ್ದೀಕ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಅವರ ಪತ್ನಿ ಆರೀಫಾ ಅವರು ಅಡುಗೆ ತಯಾರಿಯಲ್ಲಿರುವಾಗಲೇ ಈ ಫ್ರಿಜ್ ಸ್ಪೋಟಗೊಂಡಿದೆ. ಅಡುಗೆ ಮನೆಯಲ್ಲಿದ್ದ ವಸ್ತುಗಳಿಗೆ ಬೆಂಕಿ ಆವರಿಸಿಕೊಂಡಿದೆ. ತಕ್ಷಣ ಹೊರಗೆ ಓಡಿಬಂದ ಗೃಹಿಣಿ ಸ್ಥಳೀಯರಿಗೆ ವಿಚಾರ ತಿಳಿಸಿದರು.
ಕೂಡಲೇ ಕಾರ್ಯತತ್ಪರಾದ ಅಜೀಜ್ ಪಾಲೆತ್ತಡಿ, ಲತೀಫ್ ನೇಲ್ಯೊಟ್ಟು, ಅಜೀಝ್ ಹಲ್ಯಾರ, ಜನಾರ್ಧನ ರಾಮಕುಂಜ, ಅಶ್ರಫ್ ಪಟ್ಟೆ, ಫಾರೂಕ್ ಅಮೈ, ನಿಝಾರ್ ಮೊಟ್ಟೆತ್ತಡ್ಕ, ಫಾರೂಕ್ ಎಲ್ಯಂಗ, ಶಂಶೀರ್ ಗೋಳಿತ್ತಡಿ, ಶಿಯಾಬ್ ಗೋಳಿತ್ತಡಿ, ಅನ್ಸಾರ್ ಕೂಟೇಲು ನೀರಾಜೆ, ಖಾದರ್ ಬೀಜತ್ತಡಿ, ರಝಾಕ್ ಭೂಮಿಕಾ ಮತ್ತಿತರರು ಮನೆಯೊಳಗಿದ್ದ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸ್ಥಳೀಯ ಯುವಕರ ತಕ್ಷಣದ ಕಾರ್ಯಾಚರಣೆಯಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.