ಸ್ಕೂಟರ್‌ಗೆ ಢಿಕ್ಕಿ ಹೊಡೆದು ಬೈಕ್ ಸಮೇತ ಸವಾರ ಪರಾರಿ

ಸ್ಕೂಟರ್‌ಗೆ ಢಿಕ್ಕಿ ಹೊಡೆದು ಬೈಕ್ ಸಮೇತ ಸವಾರ ಪರಾರಿ

ಬಂಟ್ವಾಳ: ಪಾಣೆಮಂಗಳೂರು ಸಮೀಪದ ಬೋಳಂಗಡಿ ಎಂಬಲ್ಲಿ ಸ್ಕೂಟರಿಗೆ ಹಿಂದಿನಿಂದ ಬಂದ ಬೈಕೊಂದು ಢಿಕ್ಕಿ ಹೊಡೆದು ಬಳಿಕ ಅದರ ಸವಾರ ಬೈಕನ್ನು ನಿಲ್ಲಿಸದೆ ಪರಾರಿಯಾದ ಘಟನೆ ಸಂಭವಿಸಿದ್ದು, ಪರಿಣಾಮ ಇಬ್ಬರು ಸ್ಕೂಟರ್ ಸವಾರರು ಗಾಯಗೊಂಡಿದ್ದಾರೆ.

ಸ್ಕೂಟರ್ ಸವಾರರಾದ ಬಿ ಮೂಡ ಗ್ರಾಮದ ಮಧ್ವ ನಿವಾಸಿ ಇಲಿಯಾಸ್ ಇಬ್ರಾಹಿಂ (50) ಹಾಗೂ ಅವರ ಸ್ನೇಹಿತ ಆಸೀಫ್ ಎಂಬವರು ಗಾಯಗೊಂಡಿದ್ದಾರೆ.

ಆಸೀಫ್ ಸವಾರರಾಗಿ ಇಲಿಯಾಸ್ ಅವರು ಸಹಸವಾರರಾಗಿ ಸ್ಕೂಟರಿನಲ್ಲಿ ಕಲ್ಲಡ್ಕ ಕಡೆಯಿಂದ ಬಿ.ಸಿ.ರೋಡಿನತ್ತ ಸಂಚರಿಸುತ್ತಿದ್ದ ವೇಳೆ ಬೋಳಂಗಡಿಗೆ ತಲುಪಿದಾಗ ಹಿಂದಿನಿಂದ ಬಂದ ಬೈಕ್ ಸ್ಕೂಟರಿಗೆ ಹಿಂಭಾಗದಿಂದ ಢಿಕ್ಕಿ ಹೊಡೆದಿದೆ.

ಪರಿಣಾಮ ಎರಡೂ ದ್ವಿಚಕ್ರ ವಾಹನ ಸವಾರರು ವಾಹನಗಳ ಸಹಿತ ರಸ್ತೆಗೆ ಬಿದ್ದಿದ್ದು, ಈ ಪೈಕಿ ಬೈಕ್ ಸವಾರ ವಿಶ್ವನಾಥ ಅವರು ತಾನಾಗಿ ಎದ್ದು ಬೈಕಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆನ್ನಲಾಗಿದೆ.

ಸ್ಥಳೀಯರು ರಸ್ತೆಗೆ ಬಿದ್ದು ಗಾಯಗೊಂಡಿದ್ದ ಸ್ಕೂಟರ್ ಸವಾರರನ್ನು ಉಪಚಿರಿಸಿ ತುಂಬೆ ಆಸ್ಪತ್ರೆಗೆ ಸಾಗಿಸಿ ಬಳಿಕ ಅಲ್ಲಿಂದ ಆಸೀಫ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article