ಅಕ್ರಮ ಮರಳುಗಾರಿಕಾ ಸ್ಥಳಕ್ಕೆ ದಾಳಿ
Wednesday, September 30, 2026
ಬಂಟ್ವಾಳ: ಬಡಗಬೆಳ್ಳೂರು ಗ್ರಾಮದ ಪಲ್ಲಿಪ್ಪಾಡಿಯ ರಾಟೆ ಎಂಬಲ್ಲಿನ ಕೆರೆಯ ಬಳಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಈ ದಾಳಿ ಕಾರ್ಯಾಚರಣೆ ನಡೆಸಿದ್ದು, ಸಂಘಟಿಸಿದ್ದಾರೆ. ಈ ಸಂದರ್ಭ ಪರಾರಿಯಾಗಲು ಯತ್ನಿಸಿದ ಬಡಗಬೆಳ್ಳೂರು ನಿವಾಸಿಗಳಾದ ಇರ್ಪಾನ್ (40) ಹಾಗೂ ನೌಶಾದ್ (31) ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳದಲ್ಲಿದ್ದ ಎರಡು ಪಿಕಪ್‌ನಷ್ಟಿದ್ದ ಮರಳು ಸಹಿತ ಇತರ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.