ಹೃದಯಾಘಾತಕ್ಕೊಳಗಾಗಿ ವ್ಯಕ್ತಿ ಸಾವು

ಹೃದಯಾಘಾತಕ್ಕೊಳಗಾಗಿ ವ್ಯಕ್ತಿ ಸಾವು

ಬಂಟ್ವಾಳ: ಇಲ್ಲಿಗೆ ಸಮೀಪದ ಕುಕ್ಕಾಜೆ ದಿವಂಗತ ರಂಗಪ್ಪ ನಾಯಕ್ ಅವರ ಪುತ್ರ ಕೃಷ್ಣ ಪ್ರಸಾದ್ ನಾಯಕ್ (43) ಅವರು ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದ್ದಾರೆ.

ಕುಕ್ಕಾಜೆಯಲ್ಲಿ ಸಾರಸ್ವತ ಸಂಕೀರ್ಣವನ್ನು ಹೊಂದಿದ್ದು ಅವರು ಅದೇ ಸಂಕೀರ್ಣದಲ್ಲಿ ಹನ್ಮಾನ್ ರಿಚಾರ್ಜ್ ಸೆಂಟರ್ನ್ನು ನಡೆಸುತ್ತಿದ್ದಾರೆ.ತಮ್ಮ ಕಾಯಕದಲ್ಲೇ ನಿರತರಾಗಿದ್ದಾಗ ಹಠಾತ್  ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದರು.

ಮೃತರು ಮೂವರು ಅಣ್ಣಂದಿರು, ನಾಲ್ವರು ಅಕ್ಕಂದಿರನ್ನು ಅಗಲಿರುತ್ತಾರೆ.ಮೃತರು ಅವಿವಾಹಿತರಾಗಿದ್ದ ಅವರು ಪತ್ರಿಕಾ ವಿತರಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. 

ವಿಶ್ವಹಿಂದ್ ಪರಿಷತ್ ಸಂಘಟಣೆಯಲ್ಲಿ ಸಕ್ರೀಯವಾಗಿದ್ದು ಒಡಿಯೂರು ಗ್ರಾಮ ವಿಕಾಸ ಯೋಜನೆಯಲ್ಲಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಪರಿಸರದಲ್ಲಿ “ಪಾಪಣ್ಣ” ಎಂದೇ ಚಿರಪರಿಚಿತರಾಗಿದ್ದಾರೆ..

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article