MRPLನಲ್ಲಿ ಸ್ಫೋಟ: ಮಸೀದಿ, ಚರ್ಚ್‌ಗಳಿಗೆ ಹಾನಿ

MRPLನಲ್ಲಿ ಸ್ಫೋಟ: ಮಸೀದಿ, ಚರ್ಚ್‌ಗಳಿಗೆ ಹಾನಿ


ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಇಂದು  ಸಂಭವಿಸಿದ ಭಾರೀ ಸ್ಫೋಟದ ಸದ್ದಿಗೆ ಜೋಕಟ್ಟೆಯ ಜನತೆ ಬೆಚ್ಚಿಬಿದ್ದಿದ್ದಾರೆ.

ಘಟನೆಯಿಂದ ಜೋಕಟ್ಟೆ ಈದ್ಗಾ ಮಸೀದಿ, ಸೇಂಟ್ ಜೋಸೆಫ್ ಕಾಳಾವರ ಚರ್ಚ್ ಜೋಕಟ್ಟೆ, ಜೋಕಟ್ಟೆ ಮಸೀದಿ ಹಾಗು ಸ್ಥಳೀಯ ಹಲವು ಮನೆಗಳಿಗೆ ಹಾನಿಯಾಗಿದೆ.

ಮನೆಗಳಿಗೆ ಹಾನಿ, ಸ್ಥಳೀಯರ ಆಕ್ರೋಶ...

ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಕೆಲವು ಮನೆಗಳಿಗೆ ಹಾನಿಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಹಾನಿಗೊಳಗಾದ ಮನೆಗಳನ್ನು MRPL ಆಡಳಿತ ದುರಸ್ತಿ ಮಾಡಿಕೊಡಬೇಕು. ಇಲ್ಲದಿದ್ದರೆ ಕಂಪೆನಿಯಲ್ಲಿ ಕೆಲಸ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳೀಯರು MRPLನ ಕಾರ್ಗೊ ಗೇಟ್ ಬಳಿ ಸುಮಾರು ಒಂದು ಗಂಟೆ ಪ್ರತಿಭಟನೆ ನಡೆಸಿದರು. ಗೇಟ್ ಬಂದ್ ಮಾಡಿ, ಜನರ ಪ್ರಾಣಕ್ಕಿಂತಲೂ ಕಂಪೆನಿಯ ಕೆಲಸವೇ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸ್ಫೋಟದಿಂದ 50ಕ್ಕೂ ಅಧಿಕ ಮಂದಿಗೆ ಗಾಯಗಳಾಗಿರುವ ಸಾಧ್ಯತೆ ಇದೆ ಎಂದು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ಬಜ್ಪೆ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಬಳಿಕ ಪಣಂಬೂರು ಉಪವಿಭಾಗದ ಎಸಿಪಿ ಶ್ರೀಕಾಂತ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಬಳಿಕ ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article