ನ್ಯಾಯಾಧೀಶರು ಚಲಾಯಿಸುತ್ತಿದ್ದ ಕಾರಿಗೆ ಗೂಡ್ಸ್ ರಿಕ್ಷಾ ಢಿಕ್ಕಿ: ಸಾವು

ನ್ಯಾಯಾಧೀಶರು ಚಲಾಯಿಸುತ್ತಿದ್ದ ಕಾರಿಗೆ ಗೂಡ್ಸ್ ರಿಕ್ಷಾ ಢಿಕ್ಕಿ: ಸಾವು

ಮಂಗಳೂರು: ನಗರದ ಕರಂಗಲ್ಪಾಡಿಯಲ್ಲಿ ನ್ಯಾಯಾಲಯ ಸಂಕೀರ್ಣವನ್ನು ಸಂಪರ್ಕಿಸುವ ರಸ್ತೆಯ ಇಳಿಜಾರಿನಲ್ಲಿ ಮಂಗಳವಾರ ಸಾಗಿಬಂದ ಗೂಡ್ಸ್ ರಿಕ್ಷಾ ಚಾಲಕನ ನಿಯಂತ್ರಣ ಕಳೆದುಕೊಂಡು  ನ್ಯಾಯಾಧೀಶರೊಬ್ಬರು ಚಲಾಯಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. 

ಈ ಅಪಘಾತದಲ್ಲಿ ಗೂಡ್ಸ್ ರಿಕ್ಷಾ ಚಾಲಕ ಚಂದ್ರ ಕೆ. (67) ಮೃತಪಟ್ಟಿದ್ದಾರೆ. 

ಕಾರಿಗೆ ಡಿಕ್ಕಿ ಹೊಡೆದ ರಭಸದಲ್ಲಿ ಪಲ್ಟಿ ಹೊಡೆದ ಗೂಡ್ಸ್ ರಿಕ್ಷಾ ಸ್ಕೂಟರ್ ಒಂದರ ಮೇಲೆ ಉರುಳಿದ್ದು, ಅದರ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಚಲಾಯಿಸುತ್ತಿದ್ದ ನ್ಯಾಯಾಧೀಶರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. 

‘ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ವಿನಯ್ ಡಿ. ಅವರು ಕರ್ತವ್ಯದ ನಿಮಿತ್ತ ಮನೆಯಿಂದ ಬಾವುಟಗುಡ್ಡದಲ್ಲಿರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ, ರಾಧಾ ಮೆಡಿಕಲ್ಸ್ ಎದುರಿನ ತಿರುವಿನ ಬಳಿ ಗೂಡ್ಸ್ ರಿಕ್ಷಾವೊಂದು ನಿಯಂತ್ರಣ ಕಳೆದುಕೊಂಡು ನ್ಯಾಯಾಲಯ ಸಂಕೀರ್ಣದ ಕಡೆಯ ರಸ್ತೆಯ ಇಳಿಜಾರಿನಲ್ಲಿ ವೇಗವಾಗಿ ಸಾಗಿ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಸ್ಕೂಟರ್ ಮೇಲೆ ಬಿದ್ದಿತ್ತು. ಅಪಘಾತದಿಂದ ಕಾರು, ಗೂಡ್ಸ್ ರಿಕ್ಷಾ ಮತ್ತು ದ್ವಿಚಕ್ರ ವಾಹನಗಳು ಜಖಂಗೊಂಡಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ನ್ಯಾಯಾಧೀಶರಾದ ವಿನಯ್ ಡಿ ಅವರು ಕದ್ರಿ ಸಂಚಾರ ಠಾಣೆಗೆ ದೂರು ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article