ನೋಟಿಸ್ ವಾಪಾಸ್ ಪಡೆಯಲು ಅಗ್ರಹ

ನೋಟಿಸ್ ವಾಪಾಸ್ ಪಡೆಯಲು ಅಗ್ರಹ

ಮಂಗಳೂರು: ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಪೋಲಿಸ್ ನೊಟೀಸು ನೀಡಿರುವುದನ್ನು ದ.ಕ. ಜಿಲ್ಲಾ ಬಿಜೆಪಿ ಖಂಡಿಸಿದೆ.

ರಾಜ್ಯದ ಕಾಂಗ್ರೇಸ್ ಸರಕಾರ ದಿವಾಳಿ ಎದ್ದಿದ್ದು ಜನರ ಗಮನ ಬೇರೆಡೆ ಸೆಳೆಯಲು ಅರ್‌ಎಸ್‌ಎಸ್ ಮುಖಂಡರನ್ನು ಗುರಿಯಾಗಿಸಿಕೊಳ್ಳುತ್ತಿದೆ. ಅರ್‌ಎಸ್‌ಎಸ್ ಮೇಲಿನ ದ್ವೇಷವನ್ನು ಪ್ರಸ್ತುತ ಸನ್ನಿವೇಶವನ್ನು ಬೇರೆಕಡೆಗೆ ತಿರುಗಿಸಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ದ್ವೇಷಫೂರಕವಾಗಿ ಜಾರಿಗೊಳಿಸಲು ಯತ್ನಿಸುತ್ತಿದ್ದಾರೆ. ನೋಟಿಸ್‌ಜಾರಿ ಮೂಲಕ ಸಂಘಟನೆಯ ತೇಜೋಭಂಗಕ್ಕೆ ಯತ್ನಿಸಲಾಗಿದೆ. ಅರ್‌ಎಸ್‌ಎಸ್ ಸಂಘ ಪರಿವಾರವನ್ನು ತುಳಿಯಲು ಪ್ರಯತ್ನಿಸಿದಷ್ಟು ಅದು ಬಲಾಢ್ಯವಾಗಿ ಬೆಳೆಯುತ್ತದೆ. ಡಾ. ಕಲ್ಲಡ್ಕ ಪ್ರಭಾಕರ ಭಟ್‌ಆವರಿಗೆ ನೀಡಿರುವ ಪೋಲಿಸ್ ನೋಟಿಸ್‌ನ್ನು ತಕ್ಷಣ ವಾಪಾಸ್ ಪಡೆಯಬೇಕು. ಹಿರಿಯ ಪೋಲಿಸ್ ಅಧಿಕಾರಿಗಳು ಸರಕಾರದ ಕೈಗೊಂಬೆಯಾಗದೆ ಸ್ವಂತ ವಿವೇಚನೆಯಿಂದ ಕೆಲಸ ಮಾಡಬೇಕೆಂದುಜಿಲ್ಲಾ ಬಿಜೆಪಿ ಸತೀಶ್ ಕುಂಪಲ ಅಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article