ಹೈಡ್ರೋ ಸಲ್ಫರ್ ಸಂಸ್ಕರಣಾ ಘಟಕದ ಕೆಲಸವೇ ಮಾಲಿನ್ಯ ಕಡಿಮೆಗೊಳಿಸುವುದು..

ಹೈಡ್ರೋ ಸಲ್ಫರ್ ಸಂಸ್ಕರಣಾ ಘಟಕದ ಕೆಲಸವೇ ಮಾಲಿನ್ಯ ಕಡಿಮೆಗೊಳಿಸುವುದು..

ಮಂಗಳೂರು: ಮಂಗಳೂರು ತೈಲಾಗಾರ ಎಂ.ಆರ್.ಪಿ.ಎಲ್.ನ ಹೈಡ್ರೋ ಸಲ್ಫರ್ ಸಂಸ್ಕರಣಾ ಘಟಕದಲ್ಲಿ ಬುಧವಾರ ಸಂಭವಿಸಿದ  ಸ್ಪೋಟ  ಸ್ಥಳೀಯರನ್ನು ಭಯಗೊಳಿಸಿದೆ.

ಆದರೆ ಈ ಘಟಕದ ಮುಖ್ಯ ಕಾರ್ಯ ಉದ್ದೇಶವೇ ವಾತಾವರಣದ ಮಾಲಿನ್ಯವನ್ನು ಕಡಿಮೆ ಮಾಡುವುದಾಗಿದೆ.

ಅತ್ಯಂತ ಒತ್ತಡದಲ್ಲಿ ಮತ್ತು ಇನ್ನೂರ ತೊಂಬತ್ತರಿಂದ ನಾಲ್ಕುನೂರ ಐವತೈದು ಡಿಗ್ರಿಯಷ್ಟು ಭಾರೀ ಉಷ್ಣತೆಯಲ್ಲಿ ಈ ಘಟಕ ಕಾರ್ಯ ನಿರ್ವಹಿಸುತ್ತದೆ. ಕಚ್ಚಾ ತೈಲದಲ್ಲಿಯ ಸಲ್ಫರ್ ಮತ್ತು ಇತರ ಮಾಲಿನ್ಯಕಾರಕ ತ್ಯಾಜ್ಯ ವಸ್ತುಗಳನ್ನು ತೆಗೆದು ಹಾಕುವ ಕೆಲಸ ಈ ಘಟಕದ್ದು. ಈ ರಿಯಾಕ್ಟರಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಲ್ಲಿ ವೇಗಪರಿವರ್ತಕಗಳನ್ನು ಬಳಸುತ್ತಾರೆ. ವಾಹನಗಳಲ್ಲಿ ತೈಲ ಉತ್ಪನ್ನಗಳನ್ನು ಇಂಧನವಾಗಿ ಬಳಸುವಾಗ  ಸಲ್ಫರ್ ಡೈ ಆಕ್ಸೈಡ್ ಹೊರಸೂಸುವಿಕೆ ಕಡಿಮೆಮಾಡುವಲ್ಲಿ ಈ ಘಟಕದ ಪ್ರಾಮುಖ್ಯತೆ ಬಹಳ. 

ರಿಯಾಕ್ಟರಿನಲ್ಲಿ ಸ್ಪೋಟ ಸಂಭವಿಸಿರುವುದರಿಂದ ರಾಸಾಯನಿಕ ಕ್ರಿಯೆ ಪೂರ್ಣಗೊಳ್ಳದೇ ಇರುವ ಸಂದರ್ಭದಲ್ಲಿ ಕೆಲವಂಶದ ಮಾಲಿನ್ಯ ವಾತಾವರಣಕ್ಕೆ ಸೇರ್ಪಡೆಯಾಗಿರಬಹುದು ಎಂಬ ಆತಂಕವಿದೆ. ಆದರೆ ಅದಿನ್ನೂ ದೃಢಪಟ್ಟಿಲ್ಲ.

ಕೆಲವು ಸಂದರ್ಭಗಳಲ್ಲಿ ಮಾಲಿನ್ಯಕಾರಕ ಅಂಶಗಳು ಜೀವುಗಳ ದೇಹವನ್ನು ಸೇರಿದಾಗ ಅವುಗಳ ದುಷ್ಪರಿಣಾಮ ತಕ್ಷಣಕ್ಕೆ ಕಂಡು ಬರದೇ ಇರಬಹುದು.ಇದಕ್ಕೆ ದೀರ್ಘಕಾಲೀನ ಅಧ್ಯಯನ ಬೇಕಾದೀತು ಎನ್ನಲಾಗುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article