ಪೊಳಲಿ: 16 ಸಾವಿರ ಮಹಿಳಾ ಭಕ್ತಾಧಿಗಳಿಗೆ ಸೀರೆ ವಿತರಣೆ

ಪೊಳಲಿ: 16 ಸಾವಿರ ಮಹಿಳಾ ಭಕ್ತಾಧಿಗಳಿಗೆ ಸೀರೆ ವಿತರಣೆ


ಬಂಟ್ವಾಳ: ನವರಾತ್ರಿ ಮಹೋತ್ಸವದ ಹಿನ್ನಲೆಯಲ್ಲಿ ಐದನೇ ದಿನವಾದ ಗುರುವಾರ ರಾತ್ರಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆದ ಲಲಿತ ಪಂಚಮಿ ಸೇವೆಯ ಪ್ರಯುಕ್ತ  ಸುಮಾರು 16 ಸಾವಿರ ಮಹಿಳಾ ಭಕ್ತಾಧಿಗಳಿಗೆ ಶ್ರೀದೇವಿಯ ಸೀರೆಯನ್ನು ಪ್ರಸಾದ ರೂಪದಲ್ಲಿ  ವಿತರಿಸಲಾಯಿತು.

ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ, ಕಾರ್ಯನಿರ್ಬಹಣಾಧಿಕಾರಿ ಕೆ.ಪಿ. ಚಂದ್ರಮೋಹನ್, ಮೊಕ್ತೇಸರರಾದ ಚೇರಾ ಸೂರ್ಯ ನಾರಾಯಣ ರಾವ್, ಪ್ರಧಾನ ಅರ್ಚಕರಾದ ಪವಿತ್ರವಾಣಿ ಮಾಧವ ಭಟ್, ಅರ್ಚಕರಾದ ಕೆ.ಎ.ರಾಮ ಭಟ್, ಪರಮೇಶ್ವರ ಭಟ್, ಅನಂತಪದ್ಮನಾಭ ಭಟ್, ಪದ್ಮನಾಭ ಭಟ್, ಅದರ್ಶ ಭಟ್ ಮೊದಲಾದವರಿದ್ದರು.

ಮಹಳೆಯರು ಸರತಿಸಾಲಿನಲ್ಲಿ ಅಗಮಿಸಿ ಶ್ರೀದೇವಿಯ ಸೀರೆಯನ್ನು ಸ್ವೀಕರಿಸಿ ಧನ್ಯರಾದರು.ನವರಾತ್ರಿಯ ಸಂಭ್ರಮದ ಹಿನ್ನಲೆಯಲ್ಲಿ ರಾತ್ರಿ ವೇಳೆಯಲ್ಲಿಯು ಪೊಳಲಿ ಕ್ಷೇತ್ರದಲ್ಲಿ ಜನಸ್ತೋಮವೇ ನೆರೆದಿತ್ತು. ಭಗವದ್ಬಕ್ತರು ದೇವರ ದರ್ಶನ ಪಡೆದು ಧನ್ಯರಾದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article