ವಿಶೇಷ ಚೇತನ ಮಕ್ಕಳಿಗೆ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ- ಸರ್ಕಾರಕ್ಕೆ ಮನವಿ: ಶಾಸಕ ಅಶೋಕ್ ರೈ ಭರವಸೆ

ವಿಶೇಷ ಚೇತನ ಮಕ್ಕಳಿಗೆ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ- ಸರ್ಕಾರಕ್ಕೆ ಮನವಿ: ಶಾಸಕ ಅಶೋಕ್ ರೈ ಭರವಸೆ


ಪುತ್ತೂರು: ವಿಶೇಷ ಚೇತನ ಮಕ್ಕಳಿಗೆ ಅವಶ್ಯಕವಾದ ಸವಲತ್ತುಗಳನ್ನು ಸರ್ಕಾರದಿಂದ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಆಸಕ್ತಿಯುಳ್ಳ ಮಹಿಳೆಯರೂ ಸರ್ಕಾರದಿಂದ ಆರ್ಥಿಕ ನೆರವು ಪಡೆದು ಜೆರಾಕ್ಸ್ ಅಂಗಡಿ, ಕ್ಯಾಂಟೀನ್ ಮತ್ತಿತರ ವ್ಯವಸ್ಥೆಗಳನ್ನು ನಡೆಸಲು ಮುಂದಾಗಬೇಕು. ಪುತ್ತೂರಿನಲ್ಲಿ ನೂತನವಾಗಿ ಆರಂಭವಾಗಲಿರುವ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವಿಶೇಷಚೇತನ ಮಕ್ಕಳಿಗೆ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಅಶೋಕ್ ರೈ ಹೇಳಿದರು. 

ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಕ್ಷೇತ್ರ ಶಿಕ್ಷಣಾಧಿಕಾರಿಯವ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಆಶ್ರಯದಲ್ಲಿ ನೆಲ್ಲಿಕಟ್ಟೆಯಲ್ಲಿ ವಿಶೇಷ ಅಗತ್ಯ ಉಳ್ಳ ಮಕ್ಕಳಿಗೆ ಸಾಧನ, ಸಲಕರಣೆಗಳ ವಿತರಿಸಿ ಅವರು ಮಾತನಾಡಿದರು. 

ಹತಾಶೆ ಬೇಡ

ವಿಕಲ ಚೇತನ ಮಕ್ಕಳ ಪಾಲನೆ ಸುಲಭ ಸಾಧ್ಯವಲ್ಲ. ಸರ್ಕಾರದಿಂದ ಸೌಲಭ್ಯ ಒದಗಿಸಬಹುದು ಆದರೆ ಆ ನೋವನ್ನು ಯಾರಿಂದಲೂ ನಿವಾರಣೆ ಮಾಡಲು ಸಾಧ್ಯವಿಲ್ಲ. ಇಂತಹ ಮಕ್ಕಳ ತಾಯಂದಿರು ಯಾವುತ್ತೂ ಹತಾಶೆಗೆ ಒಳಗಾಗಬಾರದು. ವಿಕಲಚೇತನ ಮಕ್ಕಳೂ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಅಂತಹ ಮಕ್ಕಳನ್ನು ಮನೆಯಲ್ಲಿ ಕುಳಿತುಕೊಳ್ಳಿಸದೆ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಗೆ ಕಳುಹಿಸಬೇಕು. ಧೈರ್ಯಗುಂದದೆ ಆ ಮಕ್ಕಳನ್ನು ಬೆಳೆಸುವ ತಾಯಂದಿರಿಂದ ಮಕ್ಕಳು ಖಂಡಿತಾ ಬದುಕುಕಟ್ಟಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಹೇಳಿದರು. 

102 ಮಂದಿಗೆ ವಿತರಣೆ

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್ ಮಾತನಾಡಿ, ಒಂದರಿಂದ ಹತ್ತನೇ ತರಗತಿ ವರೆಗೆ ದಾಖಲಾಗಿರುವ ವಿಶೇಷ ಚೇತನ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 52 ಮಂದಿಗೆ ಟಿಎಲ್‌ಎಮ್ ಕಿಟ್, 20 ಮಂದಿಗೆ ವ್ಹೀಲ್ ಚೆಯರ್, 19 ಮಂದಿದೆ ರೋಲ್ಟರ್, ದೃಷ್ಠಿದೋಷವಿರುವ ಇಬ್ಬರಿಗೆ ಯುನಿವರ್ಸಲ್ ಬ್ರೈಲ್ ಹಾಗೂ ಶ್ರಾವಣ ದೋಷವಿರುವ ೯ ಮಂದಿಗೆ ಶ್ರಾವಣ ಸಾಧನಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲ್ವಿಯಾ ಎ.ಆರ್ ಕ್ಯಾಸ್ಟಲಿನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ವಂದಿಸಿದರು. ಬಿಆರ್‌ಪಿ ನಾಗೇಶ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article