ಎಂಆರ್‌ಪಿಎಲ್: 1,881 ಕೋಟಿ ರೂ. ನಿವ್ವಳ ಲಾಭ

ಎಂಆರ್‌ಪಿಎಲ್: 1,881 ಕೋಟಿ ರೂ. ನಿವ್ವಳ ಲಾಭ

ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) 2026-27ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 1,881 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.

ಅಕ್ಟೋಬರ್ 14ರಂದು ನಡೆದ ಕಂಪನಿಯ ನಿರ್ದೇಶಕರ ಮಂಡಳಿಯ 278ನೇ ಸಭೆಯಲ್ಲಿ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ ಎರಡನೇ ತ್ರೈಮಾಸಿಕ ಹಾಗೂ ಮೊದಲ ಅರ್ಧ ವರ್ಷದ ಹಣಕಾಸು ಫಲಿತಾಂಶಗಳಿಗೆ ಅನುಮೋದನೆ ನೀಡಲಾಯಿತು.

ಎರಡನೇ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆಯ ಆದಾಯ 35,590 ಕೋಟಿ ರೂ. ಆಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 25,953 ಕೋಟಿ ರೂ. ಇತ್ತು. ತೆರಿಗೆ ಪೂರ್ವ ಲಾಭ 2,519 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 975 ಕೋಟಿ ರೂ. ಆಗಿತ್ತು. ತೆರಿಗೆ ನಂತರದ ಲಾಭ 639 ಕೋಟಿ ರೂ.ನಿಂದ 1,881 ಕೋಟಿ ರೂ.ಗೆ ಹೆಚ್ಚಳವಾಗಿದೆ.

2026-27ನೇ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಕಂಪನಿಯ ಕಾರ್ಯಾಚರಣೆಯ ಆದಾಯ 77,199 ಕೋಟಿ ರೂ. ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 46,942 ಕೋಟಿ ರೂ. ಆಗಿತ್ತು. ಆರು ತಿಂಗಳ ತೆರಿಗೆ ನಂತರದ ಲಾಭ 2,796 ಕೋಟಿ ರೂ. ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 367 ಕೋಟಿ ರೂ. ದಾಖಲಾಗಿತ್ತು.

ಕಂಪನಿಯ ನಿರ್ದೇಶಕರ ಮಂಡಳಿಯು ಪ್ರತಿ ಷೇರಿಗೆ 3 ರೂ.ಗಳಂತೆ ಶೇ.30ರಷ್ಟು ಮೊದಲ ಮಧ್ಯಂತರ ಲಾಭಾಂಶ ಘೋಷಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article