ಎಸ್ಐಟಿ: ನಾಲ್ಕನೇ ಹಂತದ ಸಭೆ
Thursday, October 15, 2026
ಮಂಗಳೂರು: ಉಜಿರೆ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆ ಹಿನ್ನೆಲೆಯಲ್ಲಿ ಎಸ್ಐಟಿ ಇಂದು ಮಂಗಳೂರಿನಲ್ಲಿ ನಾಲ್ಕನೇ ಹಂತದ ಸಭೆ ನಡೆಸಿದೆ.
ಪ್ರಕರಣದ ಐದು ತನಿಖಾ ವರದಿಗಳನ್ನು ಎಸ್ಐಟಿ ಪರಿಶೀಲಿಸುತ್ತಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಒಂದು, ಮೂರು ಸಿಐಡಿ ತನಿಖಾ ವರದಿ ಹಾಗೂ ಒಂದು ಸಿಬಿಐ ತನಿಖಾ ವರದಿ. ಸಾವಿರಾರು ಪುಟಗಳ ಈ ತನಿಖಾ ವರದಿಯನ್ನು ಪರಿಶೀಲಿಸಿದ ಬಳಿಕವೇ ಎಸ್ಐಟಿ ಅಖಾಡಕ್ಕಿಳಿಯಲಿದೆ.