ಸೌದಿ ಅರೇಬಿಯಾದಲ್ಲಿ ಅತಂತ್ರ ಸ್ಥಿತಿಯಲ್ಲಿ 500ಕ್ಕೂ ಹೆಚ್ಚು ಉಮ್ರಾ ಯಾತ್ರಾರ್ಥಿಗಳು
ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅಸೋಸಿಯೇಶನ್ನ ಉಪಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಯಾತ್ರಾರ್ಥಿಗಳು ಸೌದಿ ಅರೇಬಿಯಾದ ರಿಯಾದ್, ದಮ್ಮಾಮ್, ಜಿದ್ದಾ, ಮದೀನಾ ಮೊದಲಾದ ಸ್ಥಳಗಳಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂದರು.
ಕೆಲವರ ಪ್ರಯಾಣ ಯೋಜನೆ ಅಸ್ತವ್ಯಸ್ಥಗೊಂಡಿವೆ. ವಿಮಾನಗಳ ರದ್ಧತಿಯಿಂದಾಗಿ ಪ್ರಯಾಣಿಕರಿಗೆ ಟಿಕೆಟ್ ಹಣ ಮರು ಪಾವತಿಯಾಗುವ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ. ಯಾತ್ರಾರ್ಥಿಗಳ ವಸತಿ ವ್ಯವಸ್ಥೆಗಾಗಿ ಟ್ರಾವೆಲ್ ಸಂಸ್ಥೆಗಳು ಮುಂಗಡವಾಗಿ ಹೊಟೇಲ್ಗಳಿಗೆ ಪಾವತಿಸಿರುವ ಹಣ ಹಿಂತಿರುಗಿ ಪಡೆಯುವುದೂ ಕಷ್ಟವಾಗಿದೆ. ಕೆಲವು ಹೊಟೇಲ್ ಬುಕ್ಕಿಂಗ್ಗಳಿಗೆ ಪಾವತಿಸಿದ ಮೊತ್ತ ಮರು ಪಡೆಯಲು ಸಾಧ್ಯವಾಗದಿರುವುದು ಸಂಸ್ಥೆಗಳು ಆರ್ಥಿಕ ನಷ್ಟ ಎದುರಿಸುವಂತಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ಸೌದಿಯಲ್ಲಿರುವ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಬೇಕು. ವಿಮಾನ ರದ್ಧತಿಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ನಿಯಮಾನುಸಾರ ಹಣ ಮರುಪಾವತಿಗೆ ಮಾಡಲು ಕ್ರಮ ವಹಿಸಬೇಕು. ಟ್ರಾವೆಲ್ ಸಂಸ್ಥೆಗಳು ಎದುರಿಸುತ್ತಿರುವ ಹೊಟೇಲ್ ಬುಕಿಂಗ್ ಹಣದ ನಷ್ಟ ಹಾಗೂ ಮರು ಪಾವತಿ ವಿಳಂಬದ ಸಮಸ್ಯೆಗಳನ್ನು ಸಂಬಂಧಪಟ್ಟ ಸಂಸ್ಥೆಗಳು ಸಹಾನುಭೂತಿಯಿಂದ ಪರಿಗಣಿಸಬೇಕು. ಪ್ರಯಾಣಿಕರು ಹಾಗೂ ಯಾತ್ರಾರ್ಥಿಗಳು ಟ್ರಾವೆಲ್ ಸಂಸ್ಥೆಗಳೊಂದಿಗೆ ಸಹಕರಿಸಿ ಹಣ ಮರುಪಾವತಿಗೆ ಅಗತ್ಯ ಕಾಲಾವಕಾಶ ಒದಗಿಸಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಝಾಕಿರ್, ಹಮೀದ್, ಹಸನ್ ಸಾದ್, ಇಕ್ಬಾಲ್, ಮೊಯ್ದಿನ್, ಝಾಕಿರ್ ಇಕ್ಲಾಸ್ ಉಪಸ್ಥಿತರಿದ್ದರು.