ಅ. 20ರಂದು ಶ್ರೀರಾಮುಲು ಮೂಡುಬಿದಿರೆಗೆ

ಅ. 20ರಂದು ಶ್ರೀರಾಮುಲು ಮೂಡುಬಿದಿರೆಗೆ


ಮೂಡುಬಿದಿರೆ: ಕನಾ೯ಟಕ ಸರಕಾರದ ಮಾಜಿ ಸಚಿವ ಶ್ರೀರಾಮುಲು ಅ. 20ರಂದು ಮೂಡುಬಿದಿರೆಗೆ ಆಗಮಿಸಲಿದ್ದಾರೆ. 

ಅವರು ಮೂಡುಬಿದಿರೆ ಸಮೀಪದ ಬನ್ನಡ್ಕ ಶ್ರೀ ಕ್ಷೇತ್ರ ಕಲಾಮಂದಿರದಲ್ಲಿ  ನಡೆಯುವ 5ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಅಂಗವಾಗಿ ಸಂಜೆ 4.00ಗಂಟೆಗೆ ನಡೆಯುವ ಧಾಮಿ೯ಕ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. 

ಬಿಜೆಪಿಯ ಪ್ರಮುಖ ನಾಯಕರಾಗಿರುವ ಶ್ರೀರಾಮುಲು ಅವರು 2006ರಲ್ಲಿ ಪ್ರವಾಸೋದ್ಯಮ ಸಚಿವ, 2008ರಲ್ಲಿ ಆರೋಗ್ಯ ಸಚಿವರಾಗಿ ಹಾಗೂ 2021-23ರವರೆಗೆ ಬುಡಕಟ್ಟು ಕಲ್ಯಾಣದ ಸಚಿವರಾಗಿದ್ದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಚಿವರಾಗಿದ್ದ ಸಂದಭ೯ದಲ್ಲಿ '108' ಅಂಬುಲೆನ್ಸ್ ಸೇವೆಯನ್ನು ಆರಂಭಿಸಿ ಗಮನ ಸೆಳೆದಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article