ಗೃಹಲಕ್ಷ್ಮಿ ಹಣದಿಂದ ವಸ್ತ್ರಮಳಿಗೆ ಆರಂಭ

ಗೃಹಲಕ್ಷ್ಮಿ ಹಣದಿಂದ ವಸ್ತ್ರಮಳಿಗೆ ಆರಂಭ


ಮಂಗಳೂರು: ಬಂಟ್ವಾಳ ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ’ಗೃಹಲಕ್ಷ್ಮಿ’ ಹಣ ಕೂಡಿಟ್ಟ ಮಹಿಳೆಯೋರ್ವರು ಸ್ವಂತ ಟೈಲರಿಂಗ್ ಮತ್ತು ವಸ್ತ್ರಮಳಿಗೆ ಆರಂಭಿಸಿ ಗಮನ ಸೆಳೆದಿದ್ದಾರೆ.

ಇಲ್ಲಿನ ಮಾವಿನಕಟ್ಟೆ ನಿವಾಸಿ, ’ಗೃಹಲಕ್ಷ್ಮಿ’ ಯೊಜನೆ ಫಲಾನುಭವಿ ಶಕುಂತಲಾ ಎಂಬವರು ತನಗೆ ಪ್ರತೀ ತಿಂಗಳು ಬರುತ್ತಿದ್ದ ತಲಾ 2 ಸಾವಿರ ರೂ. ಮೊತ್ತ ಕೂಡಿಟ್ಟ ಹಣದಲ್ಲಿ ತನ್ನ ಕನಸಿನಂತೆ ’ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್ ಟೈಲ್ಸ್ ಮತ್ತು ಗಾರ್ಮೆಂಟ್ಸ್’ ಆರಂಭಿಸಿದ್ದಾರೆ. 

ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ಗುರುವಾರ ಶುಭಾರಂಭಗೊಂಡ ಈ ಮಳಿಗೆಗೆ ಬಂಟ್ವಾಳ ತಾಲೂಕು ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ,ಜಿಲ್ಲಾ ಸಮಿತಿ ಉಪಾಧ್ಯಕ್ಷ  ನಾರಾಯಣ ನಾಯ್ಕ್ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ತೆರಳಿ ಅಭಿನಂದಿಸಿದ್ದಾರೆ. 

ನಾನು ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ರೂ 72 ಸಾವಿರ ಮೊತ್ತ ’ಗೃಹಲಕ್ಷ್ಮಿ’ ಹಣ ಸಂಗ್ರಹಿಸಿ, ಒಟ್ಟು ರೂ 2.50 ಲಕ್ಷ ವೆಚ್ಚದಲ್ಲಿ ಎರಡು ಟೈಲರಿಂಗ್ ಯಂತ್ರ ಸಹಿತ ಟೆಕ್ಸ್ ಟೈಲ್ ಆರಂಭಿಸಿದ್ದೇನೆ.  ನನ್ನ ಪತಿ ಜಯಾನಂದ ಅವರು ಚಾಲಕ ವೃತ್ತಿಯಲ್ಲಿದ್ದು, ಇಬ್ಬರು ಪುತ್ರರು ವಿದ್ಯಾರ್ಥಿಯಾಗಿದ್ದಾರೆ ಎಂದು ಫಲಾನುಭವಿ ಶಕುಂತಳಾ ಪ್ರತಿಕ್ರಿಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article