ಎರಡನೇ ಹಂತದ ಗರ್ಭಕಂಠ ಕ್ಯಾನ್ಸರ್‌ಗೆ ಹೆಚ್‌ಪಿವಿ ಲಸಿಕಾ ಅಭಿಯಾನ
ಅವರು ಇಂದು ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ಈ ಲಸಿಕೆಯ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು, ಆದುದರಿಂದ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದು, ಜನರು ಭಯಪಡುವ ಅವಶ್ಯಕತೆ ಇಲ್ಲ. 1978ರಿಂದ ಈ ಲಸಿಕಾ ಅಭಿಯಾನ ಪ್ರಾರಂಭವಾಗಿದ್ದು, ಮುಕ್ತವಾಗಿ ಈ ಲಸಿಕೆಯನ್ನು ಪಡೆಯಬಹುದಾಗಿದೆ ಎಂದರು.
ಲಸಿಕೆಯನ್ನು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಪಡೆಯಬಹುದು ಎಂದ ಅವರು ಲಸಿಕೆ ಪಡೆಯುವವರು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ಒಳಗೆ ಪಡೆಯಬೇಕು ಎಂದು ಹೇಳಿದರು.
ಈಗಾಗಲೇ ಅಧಿಕಾರಿಗಳು ಎಲ್ಲಾ ಶಾಲೆ, ವಸತಿ ನಿಲಯಗಳಿಗೆ ತೆರಳಿ ಮಾಹಿತಿಯನ್ನು ನೀಡಿದ್ದು, ಮೊದಲ ಹಂತದ ಅಭಿಯಾನದಲ್ಲಿ 8280 ಲಸಿಕೆಯನ್ನು ನೀಡಲಾಗಿದ್ದು, ಈಗ ಜಿಲ್ಲೆಯಲ್ಲಿ 8137 ಲಸಿಕೆಗಳು ಲಭ್ಯವಿದ್ದು, ಅಗತ್ಯವಿದ್ದಲ್ಲಿ ಮತ್ತಷ್ಟು ತರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಕ್ಯಾನ್ಸರ್‌ಗಳಿಂದ ಶೇ.60 ರಷ್ಟು ಜನ ಮೃತಪಡುತ್ತಿದ್ದು, ಮೂರು ಅಥವಾ ನಾಲ್ಕನೇ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಆದುದರಿಂದ ಮೊದಲ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದರಿಂದ ಮಾತ್ರ ಸಾವು-ನೋವನ್ನು ತಪ್ಪಿಸಬಹುದಾಗಿದೆ. ಆದುದರಿಂದ ಪ್ರತಿಯೊಬ್ಬರೂ ಈ ಲಸಿಕೆಯನ್ನು ಪಡೆಯಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಈ ಒಂದು ಲಸಿಕೆಗೆ 6-8 ಸಾವಿರ ತಗಲುತ್ತಿದ್ದು, ಸರ್ಕಾರದಿಂದ ಉಚಿತವಾಗಿ ನೀಡುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಆರೋಗಯ ಅಧಿಕಾರಿಗಳು ತಿಳಿಸಿದರು.
ದಡಾರ-ರುಬೆಲ್ಲಾ ಲಸಿಕೆ ಪಡೆಯಲು ಮನವಿ:
ಬಾಂಗ್ಲಾದೇಶದಲ್ಲಿ ದಡಾರ ರೋಗ ಕಂಡುಬಂದಿದ್ದು, ಇದರು ಹೆಚ್ಚಾಗಿ ಮಕ್ಕಳಲ್ಲಿ ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹರಡುತ್ತಿದ್ದು, ಪ್ರತಿಯೊಬ್ಬರೂ ಜಾಗೃತರಾಗಬೇಕು. ದಡಾರ ಹಾಗೂ ರುಬೆಲ್ಲಾ ಪಸಿಕೆಯನ್ನು 9 ತಿಂಗಳ ಮಗುವಿಗೆ ಹಾಗೂ 16 ತಿಂಗಳ ಮಗುವಿಗೆ ಎರಡು ಹಂತದಲ್ಲಿ ನೀಡುತ್ತಿದ್ದು, ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ಹಾಕಿಸಬೇಕು ಎಂದು ಡಿಹೆಚ್‌ಒ ಮನವಿ ಮಾಡಿದರು.
ದಡಾರ ಸೋಂಕು ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಸೆಯನ್ನು ಉಂಟುಮಾಡುತ್ತದೆ. ರುಬೆಲ್ಲಾ ಸೋಂಕು ಗರ್ಭಕೋಶದ ಮೇಲೆ ಪ್ರಭಾವ ಬೀರುತ್ತಿದ್ದು, ಬಹು ಅಂಗವಿಕಲತೆ ಮಾಡುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಬರುವ ಆಸ್ಪತ್ರೆಗಳು ಆನ್‌ಲೈನ್ ಮೂಲಕ ಸೂಚಿಸಿದ ದರವನ್ನು ಮಾತ್ರ ಪಡೆಯಬೇಕು ಹೆಚ್ಚುವರಿಯಾಗಿ ಪಡೆದಿದ್ದು, ಅಂತಹ ದೂರುಗಳು ಬಂದಲ್ಲಿ ಹಣವನ್ನು ವಾಪಾಸು ಮರಳಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಡಾ. ನವೀನ್ ಕುಲಾಲ್, ಡಾ. ರಾಜೇಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.