ಸಚಿವ ಖಾದರ್ ಜನ್ಮದಿನಾಚರಣೆ: ಕೃತಕ ಕೈಕಾಲು ಜೋಡಣಾ ಶಿಬಿರ, ವಿಕಲಾಂಗ ಸಲಕರಣೆಗಳ ವಿತರಣೆ

ಸಚಿವ ಖಾದರ್ ಜನ್ಮದಿನಾಚರಣೆ: ಕೃತಕ ಕೈಕಾಲು ಜೋಡಣಾ ಶಿಬಿರ, ವಿಕಲಾಂಗ ಸಲಕರಣೆಗಳ ವಿತರಣೆ

ಮಂಗಳೂರು: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಸಂತ ಅಲೋಷಿಯಸ್ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ ಮಂಗಳೂರು, ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಬೆಂಗಳೂರು, ಯುಟಿಕೆ ಸೋಷಿಯಲ್ ಫಾರಮ್ ಮಂಗಳೂರು ಸಹಯೋಗದೊಂದಿಗೆ ಅನಿವಾಸಿ ಉದ್ಯಮಿಗಳಾದ ಡಾ. ರೊನಾಲ್ಡ್ ಕೊಲಾಸೊ ಹಾಗೂ ಶಮೀರುರ್ರಹ್ಮಾನ್ ಅವರ ಪ್ರಾಯೋಜಕತ್ವದಲ್ಲಿ ಯು.ಟಿ. ಖಾದರ್ ಜನ್ಮದಿನಾಚರಣೆ, ಬೃಹತ್ ಕೈ ಕಾಲು ಜೋಡಣಾ ಶಿಬಿರ ಹಾಗೂ ವಿಕಲಾಂಗ ಸಲಕರಣೆಗಳ ವಿತರಣಾ ಸಮಾರಂಭವು ಅಕ್ಟೋಬರ್ 12 ಮತ್ತು 13 ರಂದು ಬೆಳಗ್ಗೆ 8 ರಿಂದ ಸಂಜೆ 5 ರ ತನಕ ಕೊಡಿಯಾಲ್ ಬೈಲ್ ಅಲೋಷಿಯಸ್ ಪದವಿಪೂರ್ವ ಕಾಲೇಜು ಕ್ಯಾಂಪಸಿನ ಲೊಯೋಲಾ ಹಾಲ್ ನಲ್ಲಿ ನಡೆಯಲಿದೆ.

ಅ.12ರಂದು ಬೆಳಗ್ಗೆ 9.30ಕ್ಕೆ ಆರೋಗ್ಯ, ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಸಚಿವರಾದ ಯು.ಟಿ. ಖಾದರ್ ಉದ್ಘಾಟಿಸುವರು. ಎಂ.ಫ್ರೆಂಡ್ಸ್ ಚೆಯರ್ಮೆನ್ ಝಕರಿಯಾ ಜೋಕಟ್ಟೆ ಅಧ್ಯಕ್ಷತೆ ವಹಿಸಲಿದ್ದು, ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೊ ಸಲಕರಣೆ ವಿತರಿಸುವರು. ರಫೀಕ್ ಮಾಸ್ಟರ್ ಅವರ ಪ್ರೇರಣಾ ತರಗತಿ ನಡೆಯಲಿದೆ.

ಈಗಾಗಲೇ ನೋಂದಾವಣೆ ಮಾಡಿರುವ 110 ಮಂದಿ ವಿಕಲಾಂಗರಿಗೆ ಕೃತಕ ಕೈಕಾಲನ್ನು ಅಳತೆ ತೆಗೆದು ಅದೇ ದಿನ ತಯಾರಿಸಿ ಉಚಿತವಾಗಿ ವಿತರಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ ಆಹ್ವಾನಿತ ಅಶಕ್ತರಿಗೆ ಗಾಲಿಕುರ್ಚಿ, ಕ್ಯಾಲಿಪರ್, ವಾಕರ್ ಹಾಗೂ ಸ್ಟಿಕ್ ವಿತರಿಸಲಾಗುವುದು. ಎರಡು ದಿನದಲ್ಲಿ ಕರ್ನಾಟಕ, ಕೇರಳದ ನಾನಾ ಭಾಗಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆ ಎಂದು ಶಿಬಿರದ ಸಂಯೋಜಕ ರಶೀದ್ ವಿಟ್ಲ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article