'ಭಾರತೀಯ ಜ್ಞಾನ ಪರಂಪರೆ: ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿಯ ಮರುಕಲ್ಪನೆ': ರಾಷ್ಟ್ರೀಯ ವಿಚಾರಸಂಕಿರಣ
ಕಾರ್ಯಕ್ರಮದಲ್ಲಿ ಸ್ಕೂಲ್ ಆಫ್ ಬಿಸಿನೆಸ್ ಆ?ಯಂಡ್ ಮ್ಯಾನೇಜ್ಮೆಂಟ್ನ ಡೀನ್ ಡಾ. ಜಸ್ಟಿನ್ ಜೇಮ್ಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ಜ್ಞಾನ ಪರಂಪರೆಯ ಮಹತ್ವ ಹಾಗೂ ಸಮಕಾಲೀನ ಸಮಾಜದಲ್ಲಿ ಅದರ ಪ್ರಸ್ತುತತೆಯನ್ನು ವಿವರಿಸಿದರು.
ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ಅಂತರರಾಷ್ಟ್ರೀಯ ವ್ಯವಹಾರ ವಿಭಾಗದ ಕಾವ್ಯ ಪಿ. ಹೆಗ್ಡೆ ಅವರು ‘ಭಾರತೀಯ ಜ್ಞಾನ ಪದ್ಧತಿ: ಸುಸ್ಥಿರ ವ್ಯವಹಾರ ಪದ್ಧತಿಗಳ ಮರುಚಿಂತನೆ’ ಎಂಬ ವಿಷಯದ ಕುರಿತು ಮಾತನಾಡಿದರು. ಭಾರತೀಯ ಜ್ಞಾನ ಪರಂಪರೆಯ ತತ್ವಗಳನ್ನು ಆಧುನಿಕ ವ್ಯವಹಾರ ನಿರ್ವಹಣೆಯೊಂದಿಗೆ ಸಂಯೋಜಿಸುವುದು ಹಾಗೂ ಸುಸ್ಥಿರ ವ್ಯವಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.
ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ವಿಭಾಗದ ಉಪನ್ಯಾಸಕ ಡಾ. ವೆಂಕಟೇಶ ನಾಯಕ್ ಅವರು ‘ಭಾರತೀಯ ಜ್ಞಾನ ಪದ್ಧತಿ ಮತ್ತು ಅಂತರ್ಗತ ಅಭಿವೃದ್ಧಿ: ಹೆಚ್ಚು ಒಳಗೊಳ್ಳುವ ಸಮಾಜಕ್ಕಾಗಿ ಸ್ಥಳೀಯ ಜ್ಞಾನದ ಬಳಕೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಭಾರತೀಯ ಜ್ಞಾನ ಪರಂಪರೆಯಲ್ಲಿರುವ ಸ್ಥಳೀಯ ಜ್ಞಾನ, ಸಾಂಪ್ರದಾಯಿಕ ಮೌಲ್ಯಗಳು ಮತ್ತು ಸಮುದಾಯಗಳ ಅನುಭವಗಳು ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ಸಮಗ್ರ ಅಭಿವೃದ್ಧಿಗೆ ಹೇಗೆ ಸಹಕಾರಿಯಾಗಬಲ್ಲವು ಎಂಬುದನ್ನು ಅವರು ವಿವರಿಸಿದರು.
ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಮುಖ್ಯಸ್ಥೆ ಡಾ. ಪಿ.ವಿ. ಸುಮಿತಾ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ಸ್ಟೀವನ್ ಡಿ’ಸೋಜಾ ಎನ್. ಉಪಸ್ಥಿತರಿದ್ದರು.
ವಿಭಾಗದ ವಿದ್ಯಾರ್ಥಿಗಳಾದ ಅಮೃತಾ ಕಾರ್ಯಕ್ರಮ ನಿರೂಪಿಸಿದರು. ಕ್ಯಾರಲ್ ಸ್ವಾಗತಿಸಿ, ನಿಖಿತಾ ವಂದಿಸಿದರು.