ಎಲ್ಲಾ ಶಾಲೆಗಳಲ್ಲೂ ಕನ್ನಡ ರಾಜ್ಯೋತ್ಸವ ಆಚರಿಸಲು ಸೂಚನೆ

ಎಲ್ಲಾ ಶಾಲೆಗಳಲ್ಲೂ ಕನ್ನಡ ರಾಜ್ಯೋತ್ಸವ ಆಚರಿಸಲು ಸೂಚನೆ

ಮಂಗಳೂರು: ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ದಿನವಾಗಿದ್ದು ಎಲ್ಲಾ   ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲೂ ರಾಜ್ಯೋತ್ಸವ ಆಚರಿಸುವಂತೆ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಯವರು ಶಾಲೆಗಳಿಗೆ ಸೂಚನೆ ನೀಡುವಂತೆ ತಿಳಿಸಿದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಸರಕಾರದಿಂದ ನೇಮಕಗೊಂಡಿರುವ ಯು. ಎಚ್.ಖಾಲಿದ್ ಉಜಿರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಜರುಗಿದ ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧೀನ ಸಂಸ್ಥೆಯಾದ ಕನ್ನಡ ಜಾಗೃತಿ ಸಮಿತಿಯ ಸಭೆಯಲ್ಲಿ ಅವರು ತಿಳಿಸಿದ್ದು ಪ್ರತಿ ದಿನ ತರಗತಿಯ ಪ್ರಾರಂಭದಲ್ಲಿ  ನಾಡಗೀತೆ ಹಾಡುವುದು , ಶಾಲಾ ಕಾರ್ಯಸೂಚಿಯಲ್ಲಿ ಕನ್ನಡ ಸಂಘ ಸ್ಥಾಪಿಸುವುದು , ಕನ್ನಡ ಸಾಹಿತ್ಯ ಕಮ್ಮಟ ,ಕನ್ನಡ ಗೀತಗಾಯನ ಸ್ಫರ್ಧೆ ಮುಂತಾದ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವಂತಹ  ಚಟುವಟಿಕೆಗಳು ಕಾರ್ಯ ರೂಪಕ್ಕೆ ತರಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆಂದು ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article