ರಫ್ತುಮ ಆಮದು ವೃದ್ಧಿಗೆ ಕರಾವಳಿಯಲ್ಲಿ ಉತ್ತಮ ಅವಕಾಶ
ಕೆನರಾ ಬ್ಯಾಂಕ್ ಹಾಗೂ ಕೆಸಿಸಿಐ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದಲ್ಲಿ ನಡೆದ ರಫ್ತುದಾರರು ಮತ್ತು ಆಮದುದಾರರ ಸಭೆ’ಯಲ್ಲಿ ಅವರು ಮಾತನಾಡಿದರು.
ಅಕ್ಟೋಬರ್ 1, 2026ರಿಂದ ಜಾರಿಗೆ ಬಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ನ (RBI) ಹೊಸ ಫೆಮಾ ನಿಯಮಗಳ ಕುರಿತು ಈ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
ನಿಯಮಗಳ ಸರಳೀಕರಣ..
ಈಗ ಒಂದೇ ರೀತಿಯ ಸ್ಪಷ್ಟ ನಿಯಮಗಳು ಜಾರಿಗೆ ಬಂದಿರುವುದರಿಂದ ಮತ್ತು ಸ್ಥಳೀಯವಾಗಿ ಸಾಗಾಟ ಮಾಡಲು ಹೆಚ್ಚಿನ ಆಯ್ಕೆಗಳು ಲಭ್ಯವಿರುವುದರಿಂದ, ನಮ್ಮ ಪ್ರದೇಶದಲ್ಲಿ ರಫ್ತು-ಆಮದು ವ್ಯವಹಾರಗಳು ಬೆಳವಣಿಗೆಯಾಗಲು ಉತ್ತಮ ಅವಕಾಶವಿದೆ. ವ್ಯವಹಾರಗಳು ಕಾನೂನುಬದ್ಧವಾಗಿರಲು ಇಂತಹ ಸಭೆಗಳು ಸಹಕಾರಿ ಎಂದರು.
ವ್ಯವಹಾರದ 4 ಚಕ್ರಗಳು..
ಮುಂಬೈ ಕೆನರಾ ಬ್ಯಾಂಕ್ನ ಇಂಟಿಗ್ರೇಟೆಡ್ ಟ್ರೆಷರಿ ವಿಭಾಗದ ಮುಖ್ಯ ಮಹಾಪ್ರಬಂಧಕ ಐ. ಪಾಂಡುರಂಗ ಮಿಂತಾಧ್ಯ ಮುಖ್ಯ ಭಾಷಣ ಮಾಡಿ, ಜಾಗತಿಕ ಹಣದುಬ್ಬರ ಹಾಗೂ ಬಡ್ಡಿ ದರ ಏರಿಕೆಯ ಸಂದರ್ಭದಲ್ಲಿ ವ್ಯವಹಾರದ ಬೆಳವಣಿಗೆಗೆ ’ಕ್ಲೈಂಟ್ ಸಾಮರ್ಥ್ಯ, ಸಂಪನ್ಮೂಲ/ಉತ್ಪಾದನೆ, ಹಣಕಾಸು/ಬ್ಯಾಂಕಿಂಗ್ ಹಾಗೂ ಮಾರ್ಕೆಟಿಂಗ್’ ಎಂಬ 4 ಪ್ರಮುಖ ಅಂಶಗಳು ಬುನಾದಿಯಾಗಿದೆ ಎಂದರು.
ತಾಂತ್ರಿಕ ಮಾಹಿತಿ..
ಪರಿಷ್ಕೃತ ಫೆಮಾ ಮಾರ್ಗಸೂಚಿಗಳ ಕುರಿತು ಜಿ.ಟಿ.ಪಿ.ಸಿ.ಯ ಡಿ.ಎಂ. ರೇಖಾ ಶರ್ಮಾ ವಿಶೇಷ ಅಧಿವೇಶನ ನಡೆಸಿಕೊಟ್ಟರು. ಜೊತೆಗೆ, ಆರ್ಬಿಐನ ’ಎಫ್‌ಎಕ್ಸ್-ರಿಟೇಲ್’ (FX-Retail) ಹಾಗೂ ’ಆರ್ಬಿಐ ರಿಟೇಲ್ ಡೈರೆಕ್ಟ್’ ವೇದಿಕೆಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್‌ನ ಹಿರಿಯ ಅಧಿಕಾರಿಗಳಾದ ಜಿ. ವೆಂಕಟ ವರಾ ಪ್ರಸಾದ್, ಮಂಜುನಾಥ ಬಸವರಾಜ್ ಸಿಂಗೈ, ಸುನೀಲ್ ಕುಮಾರ್ ಉಪಸ್ಥಿತರಿದ್ದರು. ಕೆಸಿಸಿಐ ಗೌರವ ಕಾರ್ಯದರ್ಶಿ ಜೀತಾನ್ ಅಲೆನ್ ಸೆಕ್ವೆರಾ ವಂದಿಸಿದರು. ಕರಾವಳಿ ಭಾಗದ ಪ್ರಮುಖ ರಫ್ತುದಾರರು, ಆಮದುದಾರರು ಹಾಗೂ ಕೆಸಿಸಿಐನ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.