ಜೀವದಯಾಷ್ಟಮಿ: 18 ಬಸದಿಗಳ ದಶ೯ನ ಪಡೆದ ಸಹಸ್ರಾರು ಜೈನ ಯತ್ರಾಥಿ೯ಗಳು

ಜೀವದಯಾಷ್ಟಮಿ: 18 ಬಸದಿಗಳ ದಶ೯ನ ಪಡೆದ ಸಹಸ್ರಾರು ಜೈನ ಯತ್ರಾಥಿ೯ಗಳು


ಮೂಡುಬಿದಿರೆ: ಜೀವದಯಾಷ್ಟಮಿ ಅಂಗವಾಗಿ ಶ್ರೀ ಜೈನ ಮಠ ಹಾಗೂ 18 ಬಸದಿ ದರ್ಶನಕ್ಕಾಗಿ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಇತರ ರಾಜ್ಯಗಳಿಂದ ಸಹಸ್ರಾರು ಜೈನ ಯಾತ್ರಾರ್ಥಿಗಳು ಸೋಮವಾರ ಮೂಡುಬಿದಿರೆಗೆ ಆಗಮಿಸಿದರು.


ಜಿನೇಂದ್ರ ಭಗವಂತನ ಜಿನವಾಣಿ ಮೂಲ ಷಟ್‌ಖಂಡ ಆಗಮ ದರ್ಶನ ಹಾಗೂ ಗುರುಗಳ ಭೇಟಿಯೊಂದಿಗೆ ಯಾತ್ರಾರ್ಥಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಸಿದ್ಧಕೂಟದಲ್ಲಿ ಸರ್ವಪೂಜೆ ನಡೆಯಿತು. ಗುರುಬಸದಿ, ಲೆಪ್ಪದ ಬಸದಿ ಹಾಗೂ ಬೆಂಕಿ ಬಸದಿಗಳಲ್ಲಿ ಕ್ಷೀರಾಭಿಷೇಕ ಮತ್ತು ನವರಾತ್ರಿ ವಿಶೇಷ ಪೂಜೆ ನೆರವೇರಿಸಲಾಯಿತು.

ಜೈನ ಮಠದಲ್ಲಿ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿಗಳಿಂದ ಕ್ಷೇತ್ರ ಪರಿಚಯ ಹಾಗೂ ಪೂಜೆ ನೆರವೇರಿತು. ಬಳಿಕ ಶಾಸ್ತ್ರದಾನ ಪುಸ್ತಕ ಬಿಡುಗಡೆ ಮಾಡಲಾಯಿತು. ಧರ್ಮ ಸಂದೇಶ ನೀಡಿದ ಸ್ವಾಮೀಜಿ, ಸರ್ವರಿಗೂ ಬದುಕುವ ಹಕ್ಕಿದೆ ಎಂಬ ಸಂದೇಶವೇ ಜೀವದಯಾಷ್ಟಮಿಯ ಸಾರ ಎಂದರು.

ಬಸದಿಗಳ ಮೊಕ್ತೇಸರ ಬೆಟ್ಕೇರಿ ಸುಧೀಶ್ ಶಾಸ್ತ್ರದಾನ ಪುಸ್ತಕ ಬಿಡುಗಡೆ ಮಾಡಿದರು. ಬಸದಿಗಳ ಮೊಕ್ತೇಸರರಾದ ಪಟ್ಟಣ ಶೆಟ್ಟಿ ಸುದೇಶ್ ಕುಮಾರ್ ಹಾಗೂ ಆದರ್ಶ್ ಕೊಂಡೆ ಮನೆತನದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article