ಅಲ್ಪಸಂಖ್ಯಾತ ಸೇವಾಕೇಂದ್ರ ಅನ್ಯ ಉದ್ದೇಶ ಬಳಕೆ ಸಲ್ಲದು: ಪರಿವರ್ತನೆಯಾದರೆ ಕಾನೂನು ಹೋರಾಟ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಎಚ್ಚರಿಕೆ

ಅಲ್ಪಸಂಖ್ಯಾತ ಸೇವಾಕೇಂದ್ರ ಅನ್ಯ ಉದ್ದೇಶ ಬಳಕೆ ಸಲ್ಲದು: ಪರಿವರ್ತನೆಯಾದರೆ ಕಾನೂನು ಹೋರಾಟ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಎಚ್ಚರಿಕೆ

ಪುತ್ತೂರು: ಪುತ್ತೂರಿನ ಸಿಟಿಎ ಗುಡ್ಡೆಯಲ್ಲಿ ರೂ.1.40 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಲ್ಪಸಂಖ್ಯಾತರ ಸೇವಾಕೇಂದ್ರವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಬಾರದು. ಇದರಲ್ಲಿ ಹಾಸ್ಟೆಲ್ ನಿರ್ಮಿಸುವ ಚಿಂತನೆ ಸಲ್ಲದು. ಹಾಗೇನಾದರೂ ಪರಿವರ್ತನೆ ಮಾಡಿದರೆ ಕಾನೂನು ಹೋರಾಟ ನಡೆಸುವುದಾಗಿ ಎಂದು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಟಿ.ಎ ಶಹನವಾಜ್ ಮತ್ತು ಉಪಾಧ್ಯಕ್ಷ ಮೊಹಮ್ಮದ್ ರಫೀಕ್ ದರ್ಭೆ ಅವರು ಹೇಳಿದರು.  

ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಬಿಜೆಪಿ ಅವಧಿಯಲ್ಲಿ ಈ ಸೇವಾಕೇಂದ್ರ ಆಗಿನ ಶಾಸಕ ಸಂಜೀವ ಮಠಂದೂರು ಮುತುವರ್ಜಿಯಲ್ಲಿ ನಿರ್ಮಾಣವಾಗಿದೆ. ಪುತ್ತೂರಿನಲ್ಲಿ 2.50 ಕೋ.ರೂ. ವೆಚ್ಚದಲ್ಲಿ ಮೌಲನಾ ಅಝಾದ್ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಆದರೆ ಚುನಾವಣೆಯ ಹಿನ್ನಲೆಯಲ್ಲಿ ಉದ್ಘಾಟನೆಯಾಗಿರಲಿಲ್ಲ. ಆದರೆ ಇದೀಗ ಹಾಲಿ ಶಾಸಕರು ಸೇವಾಕೇಂದ್ರವನ್ನು ಹಾಸ್ಟೆಲ್ ಆಗಿ ಪರಿವರ್ತಿಸಲು ಮುಂದಾಗಿದ್ದಾರೆ. ಆದರೆ ಅದು ಸರಿಯಲ್ಲ. ಅಲ್ಲಿ ಅಲ್ಪಸಂಖ್ಯಾತರ ಸೇವಾಕೇಂದ್ರವೇ ಕಾರ್ಯಾರಂಭ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಅಲ್ಪಸಂಖ್ಯಾತರ ಮತಗಳಿಂದ ಗೆದ್ದಿರುವ ಹಾಲಿ ಶಾಸಕರು ಬಿಜೆಪಿ ಅವಧಿಯಲ್ಲಿ ನಿರ್ಮಾಣವಾದ ಸೇವಾಕೇಂದ್ರವನ್ನು ಪರಿವರ್ತನೆ ಮಾಡಲು ಹೊರಟಿದ್ದಾರೆ. ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದಲ್ಲಿ ಪ್ರತ್ಯೇಕ ಜಾಗದಲ್ಲಿ ಹಾಸ್ಟೆಲ್ ಮಾಡಲಿ. ಸೇವಾ ಕೇಂದ್ರ ದೂರದಲ್ಲಿದೆ. ಜನರಿಗೆ ಅನುಕೂಲವಾಗಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ. ಆದರೆ ಸೇವಾಕೇಂದ್ರಕ್ಕೆ ಜನ ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಹೋಗುತ್ತಾರೆ. ಆದರೆ ಹಾಸ್ಟೆಲ್ ಮಾಡಿದರೆ ಮಕ್ಕಳು ನಿತ್ಯವೂ ಹೋಗಬೇಕಾಗುತ್ತದೆ ಎಂದು ಅವರು ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಜನೆಗಳನ್ನು ತಂದಾಗ ಪ್ರಚಾರಕ್ಕೆ ಆದ್ಯತೆ ನೀಡಿಲ್ಲ. ಈ ಯೋಜನೆಯನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಬಳಕೆ ಮಾಡಲಾಗಿದೆ. ಆದರೆ ಈಗ ಕೇವಲ ಬ್ಯಾನರ್ ಹಾಕಿ ಪ್ರಚಾರ ಮಾತ್ರ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮೋರ್ಚಾದ ಪದಾಧಿಕಾರಿಗಳಾದ ಫೆಡ್ರಿಕ್ ಫೌಲ್, ಮೊಹಮ್ಮದ್ ಅಸ್ಗರ್ ಮುಡಿಪು, ಶೌಕತ್ ಆಲಿ ಹಿರೇಬಂಡಾಡಿ, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article