ಬಂಟ್ವಾಳ: ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್ ಅವರು ಮಂಗಳವಾರ ಸಂಜೆ ಬಂಟ್ವಾಳ ತಾ.ನ ಕಳ್ಳಿಗೆಯಲ್ಲಿರುವ ಮಾಜಿ ಸಚಿವ ಬಿ. ರಮಾನಾಥ ರೈ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೆಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಭಾಪತಿ ಸಲೀಂ ಆಹ್ಮದ್ ಹಾಗೂ ಮಾಜಿ ಸಚಿವ ರಮಾನಾಥ ರೈ ಅವರು ಸೌಹಾರ್ದಯುತ ಮಾತುಕತೆ ಹಾಗೂ ಒಂದಷ್ಟು ರಾಜಕೀಯ ಸಮಾಲೋಚನೆ ನಡೆಸಿದರಲ್ಲದೆ ಸಂಜೆಯ ಉಪಹಾರವನ್ನು ಸೇವಿಸಿ ಬಳಿಕ ಬಂಟ್ವಾಳದಲ್ಲಿರುವ ಕೇಂದ್ರದ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿಯವರ ನಿವಾಸಕ್ಕೆ ತೆರಳಿ ಅವರ ಅರ್ಶೀವಾದ ಪಡೆದರು.
ಸಭಾಪತಿಯವರ ಭೇಟಿಯ ವೇಳೆ ಪಕ್ಚದ ಮುಖಂಡರಾದ ಚಮನಧರ ಪ್ರಕಾಶ್ ಶೆಟ್ಟಿ ತುಂಬೆ, ಪಿಯೂಸ್ ರೋಡ್ರಿಗಸ್, ಬೇಬಿಕುಂದರ್, ಬಾಲಕೃಷ್ಣ ಅಂಚನ್, ಸದಾಶಿವ ಬಂಗೇರ, ತಾರನಾಥ ಶೆಟ್ಟಿ ಕಳ್ಳಿಗೆ, ವೆಂಕಪ್ಪ ಪೂಜಾರಿ ಬಂಟ್ವಾಳ, ಸಿದ್ದಿಕ್ ಗುಡ್ಡೆಯಂಗಡಿ ಮತ್ತಿತರರು ಇದ್ದರು.

