3 ತಿಂಗಳ ಬಾಕಿ ವೇತನ ತಕ್ಷಣ ನೀಡದಿದ್ದರೆ ಅಂಗನವಾಡಿ ನೌಕರರು ಹೋರಾಟಕ್ಕೆ ಇಳಿಯಲು ನಿರ್ಧಾರ
ಅಂಗನವಾಡಿ ನೌಕರರಿಗೆ ಸಹಾಯಕಿಯರಿಗೆ ಕನಿಷ್ಠ ಬದುಕಲು ತಕ್ಕ ವೇತನವನ್ನೂ ನೀಡದೆ ಕೊಡಬೇಕಾದ ಜಿಜುಬಿ ಸಂಬಳವನ್ನು ಮೂರು ತಿಂಗಳಿಂದ ನೀಡದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸತಾಯಿಸಿದರೆ ಬಡ ಅಂಗನವಾಡಿ ನೌಕರರು ಬದುಕುವುದಾದರೂ ಹೇಗೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಟೀಕಿಸಲಾಯಿತು. ಜೊತೆಗೆ ಡಿಸೆಂಬರ್ 1 ರಂದು ನಡೆಯಲಿರುವ ದುಡಿಯುವ ವರ್ಗದ ದೆಹಲಿ ಚಲೋ ಕಾರ್ಯಕ್ರಮ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಬೇಕು.ಡಿಸೆಂಬರ್ 12ರಂದು ಮಂಗಳೂರಿನಲ್ಲಿ ಅಂಗನವಾಡಿ ನೌಕರರ ಜಿಲ್ಲಾ ಸಮಾವೇಶ ನಡೆಸಬೇಕು ಹಾಗೂ 2026 ಡಿಸೆಂಬರ್ 23 ರಿಂದ 25 ತನಕ ಮೂರು ದಿನ ನಡೆಯಲಿರುವ ಅಂಗನವಾಡಿ ನೌಕರರ ಸಂಘ (ಸಿಐಟಿಯು) ನ ರಾಜ್ಯ ಸಮ್ಮೇಳನಕ್ಕೆ 8 ಮಂದಿ ಪ್ರತಿನಿಧಿಗಳು ಭಾಗವಹಿಸಬೇಕೆಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಿಐಟಿಯು ದ.ಕ. ಜಿಲ್ಲಾ ಅಧ್ಯಕ್ಷರಾದ ಬಿ.ಎಂ.ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್ ಕುಮಾರ್ ಬಜಾಲ್, ಸಿಐಟಿಯು ನಾಯಕರಾದ ಲೋಲಾಕ್ಷಿ, ಚಂದ್ರ ಪೂಜಾರಿ, ದಮಯಂತಿ, ಶಾಂತ ಮೊದಲಾದವರು ಉಪಸ್ಥಿತರಿದ್ದರು. ಮೊದಲಿಗೆ ಸಂಘದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಿ ಎಲ್ಲರನ್ನೂ ಸ್ವಾಗತಿಸಿ ಕೊನೆಗೆ ವಂದಿಸಿದರು.