ಸಿಎ ಫೌಂಡೇಷನ್ ಪರೀಕ್ಷೆ: ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ತೇರ್ಗಡೆ

ಸಿಎ ಫೌಂಡೇಷನ್ ಪರೀಕ್ಷೆ: ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ತೇರ್ಗಡೆ


ಪುತ್ತೂರು: ಸೆಪ್ಟೆಂಬರ್ 2026ರಲ್ಲಿ ನಡೆದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಬಿ.ವಿ. ಅನು ಮತ್ತು ಕೆ. ಮೂಹಮ್ಮದ್ ಅಜ್ಮಲ್ ಅವರು ಉತ್ತೀರ್ಣರಾಗುವ ಮೂಲಕ ಉತ್ತಮ ಸಾಧನೆಯನ್ನು ದಾಖಲಿಸಿದ್ದಾರೆ.

ಬಿ.ವಿ. ಅನು ಬೆಂಗಳೂರು ನಿವಾಸಿ ವೀರಭದ್ರಯ್ಯ ಮತ್ತು ಭಾಗ್ಯ ದಂಪತಿಗಳ ಪುತ್ರಿ.

ಕೆ. ಮೊಹಮ್ಮದ್ ಅಜ್ಮಲ್ ಪುತ್ತೂರು ನಿವಾಸಿ ಕೆ.ಎಂ. ಹಮ್ಜಾ ಮತ್ತು ಆಫ್ರಾ ಎಂ. ದಂಪತಿಗಳ ಪುತ್ರ.

ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಉಪನ್ಯಾಸಕರಾದ ಸಂಜಯ್ ಎಸ್, ರಾಹುಲ್, ಭರತ್ ಜಿ. ಪೈ ಹಾಗೂ ಗೀತಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article