‘ರೈತರ ಏಳಿಗೆಗಾಗಿ ಹಾಲಿನ ದರ ಹೆಚ್ಚಳ’: ಎಸ್.ಅಪ್ಪಿ

‘ರೈತರ ಏಳಿಗೆಗಾಗಿ ಹಾಲಿನ ದರ ಹೆಚ್ಚಳ’: ಎಸ್.ಅಪ್ಪಿ

ಮಂಗಳೂರು: ಸರಕಾರ ರೈತರ ಏಳಿಗೆಗಾಗಿ ಹಾಲಿನ ದರ ಹೆಚ್ಚಳ ಮಾಡಿದ್ದು, ಜನರ ಪರವಾಗಿ ಇರುವ ಸರಕಾರದ ವಿರುದ್ಧ ಸುಳ್ಳು ಮಾಹಿತಿ ನೀಡಿ ವಿಪಕ್ಷಗಳು ಪ್ರತಿಭಟನೆ ಮಾಡುತ್ತಿದೆ ಎಂದು ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ಎಸ್.ಅಪ್ಪಿ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಭಟನೆ ಮಾಡಿದರು. ದೇಶದಲ್ಲಿ ಗ್ಯಾಸ್ ಪೆಟ್ರೋಲ್ ದರ ಗಗನಕ್ಕೆ ಮುಟ್ಟಿ ದಾಗ ಎಷ್ಟು ಬಾರಿ ಹೋರಾಟ ಮಾಡಿದ್ದೀರಿ ಅವರು ಎಷ್ಟು ಬಾರಿ ಪ್ರತಿಭಟನೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಈಗ ಸರಕಾರ ರೈತರ ಪರ ನಿಂತರೆ ಬಿಜೆಪಿ ನಾಯಕರಿಗೆ ಸಹಿಸಲಿಕ್ಕೆ ಆಗುತ್ತಿಲ್ಲ. ಹೀಗಾಗಿ ಅವರು ರಸ್ತೆಗೆ ಇಳಿದು ಹೋರಾಟ ಮಾಡಿದ್ದಾರೆ. ಅದೆಷ್ಟೋ ಮಹಿಳೆಯರು ಗ್ರಾಮೀಣ ಪ್ರದೇಶದಲ್ಲಿ ಉಚಿತ ಬಸ್ ಪ್ರಯಾಣದ ಪ್ರಯೋಜನ ಪಡೆಯುತ್ತಿದ್ದಾರೆ. ಅದೆಷ್ಟೋ ಗ್ರಾಮೀಣ ಭಾಗಗಳಿಗೆ ಈಗ ಬಸ್ ಸಂಪರ್ಕ ಸರಕಾರ ನೀಡಿದೆ. ಆದರೆ ಇದರಿಂದ ರಾಜ್ಯ ಸರಕಾರ ದಿವಾಳಿ ಆಗಿದೆ ಎಂದು ಹೇಳುತ್ತಿದ್ದಾರೆ. ಹಾಗಿದ್ರೆ ನಿತ್ಯ ಶಾಸಕರು ಅಲ್ಲಿ ಅಲ್ಲಿ ಬ್ಯಾನರ್ ಹಾಕಿ ಗುದ್ದಲಿ ಪೂಜೆ ಮಾಡ್ತಾರಲ್ಲ. ಇದಕ್ಕೆ ಅನುದಾನ ಎಲ್ಲಿಂದ ಇವರ ಮನೆಯಿಂದ ತರ್ತಾರಾ? ಎಂದು ಅಪ್ಪಿ ಪ್ರಶ್ನಿಸಿದರು.

ಕೇಂದ್ರ ಸರಕಾರ ಮೊಸರಿಗೆ ಜಿಎಸ್ಟಿ ಹಾಕಿತ್ತು. ಅದು ನಮ್ಮ ಶೋಭಾ ಕರಂದ್ಲಾಜೆಗೆ ಗೊತ್ತೆ ಇಲ್ವಾ? ರಾಜ್ಯ ಸರಕಾರ ದರ ಹೆಚ್ಚಳ ಸರಕಾರದ ಬೊಕ್ಕಸಕ್ಕೆ ಅಲ್ಲ ರೈತರ ಅಭಿವೃದ್ಧಿಗಾಗಿ ಎಂದರು. 

ಪಕ್ಷದ ಪ್ರಮುಖರಾದ ಸುರೇಕ ಚಂದ್ರಹಾಸ, ಗೀತಾ ಅತ್ತಾವರ, ಅಮಿತಾ, ಚಂದ್ರಿಕಾ ರೈ, ವಿಲ್ಮಾ ಡಿ ಕೋಸ್ಟ, ಶಶಿಕಲಾ, ಗೀತಾ, ಶಾಂತಲಾ ಗಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article