ಕ್ಯಾಂಪ್ಕೊ ಚಾಕೊಲೇಟ್ ಶ್ರೇಣಿ ವಿಸ್ತರಣೆ

ಕ್ಯಾಂಪ್ಕೊ ಚಾಕೊಲೇಟ್ ಶ್ರೇಣಿ ವಿಸ್ತರಣೆ

ಮಂಗಳೂರು: ಕ್ಯಾಂಪ್ಕೊದ ನೂತನ ಚಾಕೊಲೇಟ್‌ಗಳಾದ ‘ಡೈರಿ ಡ್ರೀಮ್ ಬಾದಾಮ್ ಬೈಟ್ಸ್’ ಮತ್ತು ‘ಡೈರಿ ಡ್ರೀಮ್  ಕ್ರೀಮ್ ಬ್ರೌನಿ’ ನವೆಂಬರ್ 15ರಂದು ಮಂಗಳೂರಿನ ಫೋರಂ ಫಿಜಾ ಬೈ ನೆಕ್ಸಸ್ ಮಾಲ್‌ನ ಸೆಂಟ್ರಲ್ ಏಟ್ರಿಯಂನಲ್ಲಿ ಅನಾವರಣಗೊಳ್ಳಲಿವೆ. ಕ್ಯಾಂಪ್ಕೊ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಮಾಲ್ನ ಮಕ್ಕಳ ದಿನಾಚರಣೆಯ ಅಂಗವಾಗಿ ಸಂಜೆ 4ರಿಂದ 5.30ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.

ತನ್ನ ಚಾಕೊಲೇಟ್ ಶ್ರೇಣಿಯನ್ನು ವಿಸ್ತರಿಸಿ, ಭಾರತದಾದ್ಯಂತ ಗ್ರಾಹಕರನ್ನು ತಲುಪುವ ಕ್ಯಾಂಪ್ಕೊದ ಪ್ರಯತ್ನದಲ್ಲಿ ಈ ಉತ್ಪನ್ನಗಳ ಬಿಡುಗಡೆ ಮತ್ತೊಂದು ಹೆಜ್ಜೆಯಾಗಿದೆ. ನೂತನ ಉತ್ಪನ್ನಗಳೊಂದಿಗೆ, ಹೊಸ ವಿನ್ಯಾಸದ ಪ್ಯಾಕೇಜಿಂಗ್ನಲ್ಲಿ ಅಸ್ತಿತ್ವದಲ್ಲಿರುವ ಚಾಕೊಲೇಟ್ ಶ್ರೇಣಿಯನ್ನೂ ಪರಿಚಯಿಸಲಾಗುವುದು. ಭಾರತದ ರೈತ ಸಮುದಾಯದೊಂದಿಗೆ ಬೆಸೆದುಕೊಂಡಿರುವ ಬ್ರ್ಯಾಂಡ್‌ಗೆ ಈ ಬದಲಾವಣೆ ಹೊಸ ರೂಪ ನೀಡಲಿದೆ.

ಕ್ರೀಡಾಪಟು ಎಂ. ಆರ್. ಪೂವಮ್ಮ, ನಟ ಹಾಗೂ ನಿರ್ದೇಶಕ ಅರ್ಜುನ್ ದೇವ್ (ಅರ್ಜುನ್ ಕಾಪಿಕಾಡ್) ಮತ್ತು ಬಾಲಗಾಯಕ ಅಶ್ಮಿತ್ ಎಜೆ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕ್ಯಾಂಪ್ಕೊದ ಪ್ರಮುಖರು ಹಾಗೂ ಮಕ್ಕಳೊಂದಿಗೆ ನೂತನ ಉತ್ಪನ್ನಗಳನ್ನು ಅನಾವರಣಗೊಳಿಸಲಿದ್ದಾರೆ.

ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ವಿ. ಸತ್ಯನಾರಾಯಣ ಸ್ವಾಗತ ಭಾಷಣ ಮಾಡಲಿದ್ದಾರೆ. ಬಳಿಕ ನೂತನ ಉತ್ಪನ್ನಗಳ ಅನಾವರಣ ಹಾಗೂ ವಿಶೇಷ ಅತಿಥಿಗಳ ಸನ್ಮಾನ ನಡೆಯಲಿದೆ. ಪೂವಮ್ಮ ಅವರೊಂದಿಗೆ ಸಂವಾದ, ಅರ್ಜುನ್ ದೇವ್ ಅವರ ಮಾತುಗಳು, ಅಶ್ಮಿತ್ ಎಜೆ ಅವರ ಸಂಗೀತ ಕಾರ್ಯಕ್ರಮ ಹಾಗೂ ‘ಕಲ್ಪ ಕಿಚನ್ ಸ್ಟಾರ್’ ಸ್ಪರ್ಧೆಯ ವಿಜೇತರಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದ ಭಾಗವಾಗಿರಲಿವೆ. ಕ್ಯಾಂಪ್ಕೊ ಅಧ್ಯಕ್ಷ ಶ್ರೀ ಎಸ್. ಆರ್. ಸತೀಶ್ಚಂದ್ರ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ.

ನವೆಂಬರ್ 14 ಮತ್ತು 15ರಂದು ಮಾಲ್ನಲ್ಲಿ ಕ್ಯಾಂಪ್ಕೊ ಮಳಿಗೆಯೂ ಇರಲಿದ್ದು, ಚಾಕೊಲೇಟ್ಗಳ ಪ್ರದರ್ಶನ, ಮಾರಾಟ ಹಾಗೂ ಸಾರ್ವಜನಿಕರಿಗಾಗಿ ವಿವಿಧ ಚಟುವಟಿಕೆಗಳು ನಡೆಯಲಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article