ಅಪಘಾತ: ದ್ವಿಚಕ್ರ ಸವಾರ ಸಾವು

ಅಪಘಾತ: ದ್ವಿಚಕ್ರ ಸವಾರ ಸಾವು

ಮಂಗಳೂರು: ಲಾರಿ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ಸವಾರರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. 

ಹಳೆಯಂಗಡಿ ಕದಿಕೆ ನಿವಾಸಿ ಇಮ್ತಿಯಾಝ್ (39) ಮೃತಪಟ್ಟವರು.

ಶಿಪ್ಪಿಂಗ್ ಕಂಪೆನಿಯೊಂದರಲ್ಲಿ ಚಾಲಕರಾಗಿ ದುಡಿಯುತ್ತಿದ್ದ ಇಮ್ತಿಯಾಝ್ ಇಂದು ಬೆಳಿಗ್ಗೆ ಪಣಂಬೂರಿನ ತನ್ನ ಲಾರಿಯ ಕಚೇರಿಗೆ ತೆರಳುತ್ತಿದ್ದ ವೇಳೆ ಬೈಕಂಪಾಡಿಯಲ್ಲಿ ಈ ಘಟನೆ ನಡೆಯಿತು ಎನ್ನಲಾಗಿದೆ. 

ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಇಮ್ತಿಯಾಝ್ ಅವರನ್ನು ಸಾರ್ವಜನಿಕರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article