BREAKING
ದಕ್ಷಿಣ ಕನ್ನಡ

ಆಶಾ ಕಾರ್ಯಕರ್ತೆಯರ ಬಗ್ಗೆ ಖಾದರ್ ಹೇಳಿಕೆ, ಕಾಂಗ್ರೆಸ್‌ನ ನೈಜ ಮನಸ್ಥಿತಿ: ಸತೀಶ್ ಕುಂಪಲ

ಮಂಗಳೂರು: ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಹಕ್ಕುಗಳಿಗಾಗಿ ಆಹೋರಾತ್ರಿ ಹೋರಾಟವನ್ನು ನಡೆಸುತ್ತಿದ್ದರೂ ಸರಕಾರ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಬದಲಾಗಿ ಪ್ರತಿಭಟನೆಯನ್ನು ನಿಲ್ಲಿಸಲು ಷಡ್ಯಂತ ಮಾಡುತ್ತಿದೆ. ಆಶಾ ಕಾರ್ಯಕರ್ತರ ಬಗ್ಗೆ ಆರೋಗ್ಯ ಸಚಿವ ಖಾದರ್ ಅವರು, ಆಶಾ ಕಾರ್ಯಕರ್ತೆಯರ ಸೇವೆ ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂಬ ಉಢಾಪೆ ಮಾತುಗಳನ್ನು ಆಡಿದ್ದಾರೆ ಇದು ಕಾಂಗ್ರೆಸ್‌ನ ನೈಜ ಮನಸ್ಥಿತಿಯಾಗಿದೆ.

ಕೊರೊನಾ ಸಂಧರ್ಭದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಕುಟುಂಬ ಬಿಟ್ಟು ಮನೆಮನೆಗೆ ತೆರಳಿ ಜನರ ಆರೋಗ್ಯ ವಿಚಾರಿಸಿ ಕರ್ತವ್ಯ ಮಾಡಿದ್ದರು ಎನ್ನುವುದನ್ನು ಖಾದರ್ ನೆನಪು ಮಾಡಲಿ. ತಾವು ಹೇಳಿದ್ದೇ ನಡೆಯಬೇಕೆಂಬ ದೋರಣೆಯ ಕಾಂಗ್ರೆಸ್ ನ ದುರಂಹಕಾರಕ್ಕೆ ಆಶಾ ಕಾರ್ಯಕರ್ತರ ಪ್ರತಿಭಟನೆ ಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಇದು ಬ್ಲಾಕ್‌ಮೇಲ್ ತಂತ್ರ. ಸಂವಿಧಾನ ವಿರೋಧಿ ಮತ್ತು ಮಹಿಳಾ ವಿರೋಧಿ ನೀತಿ. ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಹಕ್ಕಿಗಾಗಿ ಧ್ವನಿ ಎತ್ತುವ ಸ್ವಾತಂತ್ರ್ಯವಿದೆ. ಕಾಂಗ್ರೆಸ್ ಇದನ್ನು ಮರೆಮಾಚಲು ಹೊರಟಿದೆ. ಬೇಜವಾಬ್ದಾರಿ ಹೇಳಿಕೆ ನೀಡಿರುವ ಖಾದರ್ ರವರು ಸಚಿವಸ್ಥಾನಕ್ಕೆ ರಾಜೀನಾಮೆ ನೀಡಲಿ ಆಗ ಆರೋಗ್ಯ ಇಲಾಖೆ ನಡೆಯುತ್ತೋ ಇಲ್ಲವೊ ನೋಡೋಣ.

ಆರೋಗ್ಯ ಸಚಿವರು ಇಲ್ಲದಿದ್ದರೂ ರಾಜ್ಯದ ಜನ ಬದುಕುತ್ತಾರೆ. ಕರ್ನಾಟಕದಲ್ಲಿ ಕಾಂಗ್ರೇಸ್ ಸರಕಾರ ಇರುವುದಕ್ಕೆ ಜನರು ಬದುಕಿದ್ದಾರೆ ಎಂಬ ಭ್ರಮೆಯಲ್ಲಿದ್ದಾರೆ. ಆಶಾ ಕಾರ್ಯಕರ್ತೆಯರ ಸೇವೆಯನ್ನು ಸರಕಾರ ಸ್ಮರಿಸಿಕೊಳ್ಳಬೇಕು. ನಿಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಜನ ಸೇರಿಸಲು ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಆಶಾಕಾಯಕರ್ತರನ್ನು ದಿನವಿಡೀ ದುಡಿಸಿಕೊಳ್ಳುತ್ತೀರಿ, ನೀವು ಭರವಸೆ ಕೊಟ್ಟಿರುವ 15,000 ರೂ.ವನ್ನು ಆಶಾ ಕಾಯಕರ್ತರು ಕೇಳುತ್ತಿದ್ದಾರೆ ಅದನ್ನು ಕೊಡಲು ಆಗದಿದ್ದರೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಲಿ ಎಂದು ಸತೀಶ್ ಕುಂಪಲ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

📢 ಡೈಲಿ ಪಲ್ಸ್ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!