BREAKING
ದಕ್ಷಿಣ ಕನ್ನಡ

ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆ: ನ.29ರಂದು ಶಿತಾ೯ಡಿತಮಯಲ್ಲಿ ಗುರುಪೂಜೆ ಮತ್ತು ಧನ್ವಂತರಿ ಮಹಾಯಾಗ


ಮೂಡುಬಿದಿರೆ: ನಾರಾಯಣ ಗುರುಗಳ 172ನೇ ಗುರು ಜಯಂತಿ ಪ್ರಯುಕ್ತ ಶಿರ್ತಾಡಿಯ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕ ಹಾಗೂ ಧನ್ವಂತರಿ ಮಹಾ ಯಾಗ ಸಮಿತಿ ಇವುಗಳ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಸಭಾಭವನದಲ್ಲಿ ನ. 29ರಂದು   ಗುರು ಪೂಜೆ ಮತ್ತು ಧನ್ವಂತರಿ ಮಹಾಯಾಗವು ಸಂಘದ ಅಧ್ಯಕ್ಷ ಸೋಮನಾಥ ಶಾಂತಿ ಮತ್ತು ಧನ್ವಂತರಿ ಮಹಾಯಾಗ ಸಮಿತಿ ಸಂಚಾಲಕ ವಿಶ್ವನಾಥ್ ಹನ್ನೆರ್ ತಿಳಿಸಿದರು. 

ಅವರು ಮೂಡುಬಿದಿರೆ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.  ಹೊಸ್ಮಾರು ಬಲ್ಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ಶ್ರೀ ನಾರಾಯಣ ಗುರು ವೈದಿಕ ಸಮಿತಿಯ ಪ್ರಮುಖರಾದ ಸೋಮನಾಥ ಶಾಂತಿಯವರ ನೇತೃತ್ವದಲ್ಲಿ ಆರೋಗ್ಯ ಮತ್ತು ಆಯುಷ್ಯ ವೃದ್ಧಿಸುವ ಸಾವಿರದ ಎಂಟು ಬಗೆಯ ಔಷಧೀಯ ಗುಣಗಳನ್ನು ಒಳಗೊಂಡ ಧನ್ವಂತರಿ ಮಹಾಯಾಗವನ್ನು ಸಮಸ್ತ ಜನ ಸಮೂಹದ ಒಗ್ಗೂಡುವಿಕೆಯೊಂದಿಗೆ ನಡೆಸಲಾಗುವುದು ಎಂದು ತಿಳಿಸಿದರು.

ಅಂದು ಪೂರ್ವಹ್ನ ಗಂಟೆ 7.30 ಸಂದರ್ಭದಲ್ಲಿ ಗುರುಪೂಜೆ, ನಂತರ ಮಹಾಯಾಗ ನಡೆಯಲಿದೆ. ಮಧ್ಯಾಹ್ನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಿಭಾಗ ಮುಖ್ಯಸ್ಥರಾದ ಅರುಣ್ ಉಳ್ಳಾಲ್ ಧಾರ್ಮಿಕ ಉಪನ್ಯಾಸ ನೀಡಲಿದ್ದು, ನಂತರ ಸಂಘದ ಶಾಶ್ವತ ಸದಸ್ಯರಿಗೆ ಸನ್ಮಾನ, ಬಹುಮಾನ ವಿತರಣೆ, ಸಂಘದ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿರುವುದಾಗಿ ತಿಳಿಸಿದರು. 2023ರಲ್ಲಿ ಸಂಘದಲ್ಲಿ ವಿಶ್ವ ಶಾಂತಿ ಯಾಗ ನಡೆದಿದ್ದು ಸಂಘವು ಶೈಕ್ಷಣಿಕ ಆರೋಗ್ಯ ಸೇರಿದಂತೆ ಸಮಾಜದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ರುಕ್ಕಯ ಪೂಜಾರಿ, ಹಾಲಿ ಕೋಶಾಧಿಕಾರಿ ಸುರೇಂದ್ರ ಕಂದಿರು ಉಪಸ್ಥಿತರಿದ್ದರು.

📢 ಡೈಲಿ ಪಲ್ಸ್ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!