ಮೂಡುಬಿದಿರೆ ರೋಟರಿ ವಿದ್ಯಾ ಸಂಸ್ಥೆಗಳಲ್ಲಿ ವಾರ್ಷಿಕ ಕ್ರೀಡೋತ್ಸವ
ಶಾಲೆಯ ಹಳೆ ವಿದ್ಯಾರ್ಥಿಯಾದ ಶಿರ್ತಾಡಿಯ ಇನ್ನೋವಿಷನ್ ನೆಟ್‌ವರ್ಕ್‌ನ ಮಾಲೀಕ , ಶಿರ್ತಾಡಿ ಪ್ಯಾಕ್ಸ್ ಬ್ಯಾಂಕ್‌ನ ಉಪಾಧ್ಯಕ್ಷ ಚಿಂತನ್ ಲೋಬೊ ಕ್ರೀಡಾಕೂಟವನ್ನು ಉದ್ಘಾಟಿಸಿ ಶಾಲೆಯ ಹಳೆ ವಿದ್ಯಾರ್ಥಿಯೆನಿಕೊಳ್ಳಲು ತನಗೆ ಹೆಮ್ಮೆಯಿದೆ. ಶಿಕ್ಷಕರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀಡುವ ತಿದ್ದುವಿಕೆ ದೂಷಣೆಯೆಂದು ಭಾವಿಸದೆ ತಮ್ಮ ಬೆಳವಣಿಗೆಯ ಮೈಲುಗಲ್ಲಾಗಿ ಪರಿಗಣಿಸಿ ಸ್ವೀಕರಿಸಬೇಕು ಎಂದರು.
ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಲ/ ರೊನಾಲ್ಡ್ ಸಿಲ್ವನ್ ಡಿಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ರೀಡಾಳುಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿ ಜೀವನದಲ್ಲಿ ಪ್ರತಿಯೊಬ್ಬರಿಗೂ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ತಮ್ಮಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ, ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಕ್ರೀಡೆಗಳಲ್ಲಿ ನಿಮ್ಮ ಭಾಗವಹಿಸುವಿಕೆ ಮೊದಲ ಗೆಲುವು. ಸ್ಪರ್ಧೆಯ ಸೋಲು - ಗೆಲುವಿಗಿಂತ ಪ್ರಯತ್ನ ಮತ್ತು ಭಾಗವಹಿಸುವಿಕೆ ಮುಖ್ಯ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾದ ರೋಟರಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರೊ. ನಾರಾಯಣ ಪಿ ಎಂ ಅವರು ಧ್ವಜಾರೋಹಣಗೈದರು. ಮತ್ತು ರೋಟರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೊ ಅನಂತಕೃಷ್ಣ ರಾವ್, ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್, ರೋಟರಿ ಕೇಂದ್ರೀಯ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಸಂಚಾಲಕ ರೊ. ಜೆ. ಡಬ್ಲ್ಯೂ.ಪಿಂಟೋ, ಆಡಳಿತ ಮಂಡಳಿಯ ಖಜಾಂಚಿ ನಾಗರಾಜ್ ಬಿ , ರೋಟರಿ ಕ್ಲಬ್ ನ ಹಿರಿಯ ಸದಸ್ಯ ಅಬ್ದುಲ್ ರವೂಫ್, ರೊ.ನಾಗರಾಜ್ ಹೆಗ್ಡೆ, ಇನ್ನರ್ ವೀಲ್ ಕ್ಲಬ್ ಡಿಸ್ಟ್ರಿಕ್ಟ್ 318 ನ ಡಿಸ್ಟ್ರಿಕ್ಟ್ ಎಡಿಟರ್ ಸಹನಾ ನಾಗರಾಜ್ ಮತ್ತು ರೋಟರಿ ವಿದ್ಯಾ ಸಂಸ್ಥೆಯ ಮೂರು ವಿಭಾಗದ ಮುಖ್ಯಸ್ಥರಾದ ರವಿಕುಮಾರ್ , ತಿಲಕಾ ಅನಂತವೀರ ಜೈನ್ ಹಾಗೂ ಲಕ್ಷ್ಮಿ ಮರಾಠೆ ಉಪಸ್ಥಿತರಿದ್ದರು.
ಕಾಲೇಜು ವಿಭಾಗದ ಕ್ರೀಡಾ ಕಾರ್ಯದರ್ಶಿ ಸುಧಾಂಶು ತಮ್ಮ ಕಾಲೇಜು , ಕೇಂದ್ರೀಯ ಶಾಲೆ ಹಾಗೂ ರೋಟರಿ ಆಂಗ್ಲ ಮಾದ್ಯಮ ಶಾಲೆಯ ವಿಶೇಷ ಸಾಧನೆ ಮಾಡಿದ ಸಹ ಕ್ರೀಡಾಪಟುಗಳೊಂದಿಗೆ ಸದ್ರಿ ಅಯ್ಯಪ್ಪ ದೇವಸ್ಥಾನದಿಂದ ತಂದ ಕ್ರೀಡಾ ಜ್ಯೋತಿಯನ್ನು ಚಿಂತನ್ ಲೋಬೊ ಅವರಿಗೆ ಹಸ್ತಾಂತರಿಸಿದರು.
ಆಡಳಿತಾಧಿಕಾರಿ ಪ್ರಫುಲ್ ಡಿಸೋಜಾ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಸತೀಶ್, ಹಿರಿಯ ಸಂಯೋಜಕರಾದ ಗಜಾನನ ಮರಾಠೆ, ದೈಹಿಕ ಶಿಕ್ಷಕರಾದ ಸುಧೀರ್ ಕುಮಾರ್ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಲಕ್ಷ್ಮಿ ಮರಾಠೆ ಸ್ವಾಗತಿಸಿದರು. ಕೇಂದ್ರೀಯ ಶಾಲೆಯ ಶಿಕ್ಷಕಿ ಪ್ರೀತಿ ಮತ್ತು ಉಪನ್ಯಾಸಕ ಅನ್ಸಿಲ್ ಪ್ರಿನ್ಸಿಸ್ಟನ್ ಸೆರಾವೋ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ವೈಶಾಲಿ ವಂದಿಸಿದರು.