ನಿವೃತ್ತ ಸೈನಿಕ ನವಾನಂದ ಅವರಿಗೆ ಬೆದ್ರ ಸೇವಾ ಪ್ರತಿಷ್ಠಾನದಿಂದ ಯೋಧ ನಮನ

ನಿವೃತ್ತ ಸೈನಿಕ ನವಾನಂದ ಅವರಿಗೆ ಬೆದ್ರ ಸೇವಾ ಪ್ರತಿಷ್ಠಾನದಿಂದ ಯೋಧ ನಮನ


ಮೂಡುಬಿದಿರೆ: ದೀಪಾವಳಿ ಸಂಭ್ರಮದ ಅಂಗವಾಗಿ ಬೆದ್ರ ಸೇವಾ ಪ್ರತಿಷ್ಠಾನ (ರಿ.) ವತಿಯಿಂದ ಜವನೆರ್ ಬೆದ್ರ ಹಾಗೂ ಅಬ್ಬಕ್ಕ ಬ್ರಿಗೇಡ್ ಸಹಯೋಗದಲ್ಲಿ  ಆಯೋಜಿಸಲಾದ 9ನೇ ವರ್ಷದ ಯೋಧ ನಮನ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಒಂಟಿಕಟ್ಟೆಯ ನವಾನಂದ (ಹವಾಲ್ದಾರ್) ಅವರನ್ನು ಭಾನುವಾರ ಸಂಜೆ ಸನ್ಮಾನಿಸಲಾಯಿತು.

ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಸೇವೆ, ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದ ಯೋಧರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಅವರ ಸ್ವಗೃಹವಾದ ಒಂಟಿಕಟ್ಟೆಯ ನಂದಾದೀಪದಲ್ಲಿ ಆಯೋಜಿಸಲಾಗಿತ್ತು.

ಕೃಷ್ಣೋತ್ಸವ ರೀಲ್ಸ್ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು. 

ಪ್ರಥಮ ಬಹುಮಾನವನ್ನು ಸ್ಕಂದ ಮತ್ತು ಸಮೃದ್ಧ್ ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಸುದರ್ಶನ್ ಬಂಗೇರ ಅವರು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬೆದ್ರ ಸೇವಾ ಪ್ರತಿಷ್ಠಾನದ  ಸಂಸ್ಥಾಪಕ ಅಮರ್ ಕೋಟೆ, ಉಪಾಧ್ಯಕ್ಷರಾದ ರಾಜೇಶ್ ಕೋಟೆಕರ್ ಮತ್ತು ನಾರಾಯಣ ಪಡುಮಲೆ, ಗೌರವ ಮಾರ್ಗದರ್ಶಕರಾದ ಪ್ರವೀಣ್ ಜೈನ್, ಪ್ರತಿಷ್ಠಾನದ ಯುವ ಸಮಿತಿ ಜವನೆರ್ ಬೆದ್ರ ಮುಂದಿನ ಸಾಲಿನ ಸಂಚಾಲಕ ಸಂದೀಪ್ ಸುವರ್ಣ ,ಗಣೇಶ್ ಪೈ, ಸುಮಂತ್ ಶೆಟ್ಟಿ, ಮನು ಆಚಾರ್ಯ, ಹಾಗೂ ಪ್ರತಿಷ್ಠಾನದ ಮಹಿಳಾ ಸಮಿತಿ ,ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸುನಿತಾ ಉದಯ್, ಕಾರ್ಯದರ್ಶಿ ರಮ್ಯಾ ದಿನೇಶ್  ಪ್ರೇಮ ಚಂದ್ರಶೇಖರ್, ಸುಕನ್ಯಾ, ಪೂರ್ಣಿಮಾ ಕಾಮತ್, ಸೌಮ್ಯ ಗಣೇಶ್, ರಾಧಿಕಾ ಶಮಿತ್, ವಾರಿಜಾ ರಮೇಶ್, ರೇವತಿ ಸುರೇಶ್ ಮತ್ತು ಶ್ವೇತಾ ಆಚಾರ್ಯ ಸೇರಿದಂತೆ ಪ್ರತಿಷ್ಠಾನದ ಟ್ರಸ್ಟಿಗಳು, ಜವನೆರ್ ಬೆದ್ರ ಹಾಗೂ ಅಬ್ಬಕ್ಕ ಬ್ರಿಗೇಡ್ ಸದಸ್ಯರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article