ಮೂಡುಬಿದಿರೆ: ಇಲ್ಲಿನ ಕಾಂಪ್ಲೆಕ್ಸ್ ಕಟ್ಟಡವೊಂದರಿಂದ ಪೈಂಟರೊಬ್ಬರು ಶುಕ್ರವಾರ ತಡರಾತ್ರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರನ್ನು ಪುತ್ತೂರಿನ ಸುರೇಶ್ ಆಚಾರ್ಯ (55) ಎಂದು ಗುರುತಿಸಲಾಗಿದೆ.
ಮೂಲತ: ಪುತ್ತೂರಿನವರಾಗಿರುವ ಸುರೇಶ್ ಅವರು ಹಲವು ವರ್ಷಗಳಿಂದ ಮೂಡುಬಿದಿರೆಯ ನಟರಾಜ್ ಕಾಂಪ್ಲೆಕ್ಸ್‌ನಲ್ಲಿ ರಾತ್ರಿ ವೇಳೆ ತಂಗುತ್ತಿದ್ದು ಶುಕ್ರವಾರ ತಡರಾತ್ರಿ ಆಯತಪ್ಪಿ ಕಟ್ಟಡದ ಮೇಲಂತಸ್ತಿನಿಂದ ಕೆಳಗೆ ಬಿದ್ದ ಪರಿಣಾಮ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.